ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೆನಡಾದ ನೂತನ ಹೈಕಮಿಷನರ್ ಕ್ರಿಸ್ಟೋಫರ್ ಕೂಟರ್ ಅವರಿಂದ ಶುಕ್ರವಾರ ಪರಿಚಯ ಪತ್ರ ಸ್ವೀಕರಿಸಿದರು –ಪಿಟಿಐ ಚಿತ್ರ
ನವದೆಹಲಿ: ಕೆನಡಾದ ನೂತನ ಹೈಕಮಿಷನರ್ ಕ್ರಿಸ್ಟೋಫರ್ ಕೂಟರ್ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ತಮ್ಮ ಪರಿಚಯ ಪತ್ರ ಹಸ್ತಾಂತರಿಸಿದರು.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣದಲ್ಲಿ ಭಾರತದ ಪಾತ್ರ ಇದೆ ಎಂದು ಕೆನಡಾ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿತ್ತು.
ಈ ಆರೋಪಗಳ ಬೆನ್ನಲ್ಲೇ ಕೆನಡಾದಲ್ಲಿನ ತನ್ನ ಹೈಕಮಿಷನರ್ ಮತ್ತು ಇತರು ಐವರು ರಾಯಭಾರಿಗಳನ್ನು ಭಾರತ (ಕಳೆದ ವರ್ಷದ ಅಕ್ಟೋಬರ್‌ನಲ್ಲಿ) ಹಿಂದಕ್ಕೆ ಕರೆಸಿಕೊಂಡಿತ್ತು. ಅಲ್ಲದೆ ಭಾರತದಲ್ಲಿನ ಕೆನಡಾ ರಾಯಭಾರ ಕಚೇರಿಯ ಅಷ್ಟೇ ಸಂಖ್ಯೆಯ ರಾಯಭಾರಿಗಳನ್ನು ಹೊರಹಾಕಿತ್ತು.
ಈ ಬೆಳವಣಿಗೆಗಳು ನಡೆದ ವರ್ಷದ ಬಳಿಕ ಎರಡೂ ದೇಶಗಳ ಹೈಕಮಿಷನರ್‌ಗಳು ನೇಮಕಗೊಂಡು, ಅಧಿಕಾರವಹಿಸಿಕೊಂಡಿದ್ದಾರೆ. ಇದು ದ್ವಿಪಕ್ಷೀಯ ಸಂಬಂಧ ಸುಧಾರಿಸುತ್ತಿರುವುದರ ಸಂಕೇತ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.