ಪಟ್ನಾ: ಮುಂಬರುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಮಾಡುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ‘ಸಾಮಾಜಿಕ ರಕ್ಷಣೆ ಮತ್ತು ಮೀಸಲಾತಿ ನೀತಿಗಳ ಸಮಗ್ರ ಪರಿಶೀಲನೆ’ ನಡೆಸಬೇಕು ಎಂದು ಆಗ್ರಹಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಬಿಹಾರದ ವಿರೋಧ ಪಕ್ಷದ ನಾಯಕರಾದ ತೇಜಸ್ವಿ ಅವರು ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶನಿವಾರ ಹಂಚಿಕೊಂಡಿದ್ದಾರೆ.
‘ಜಾತಿಗಣತಿ ನಡೆಸುವುದು ಸಾಮಾಜಿಕ ನ್ಯಾಯ ಒದಗಿಸುವ ಮೊದಲ ಹೆಜ್ಜೆಯಾಗಿದೆ. ಜಾತಿಗಣತಿಯ ದತ್ತಾಂಶವು ಸಾಮಾಜಿಕ ರಕ್ಷಣೆ ಮತ್ತು ಮೀಸಲಾತಿ ನೀತಿಗಳ ಸಮಗ್ರ ಪರಿಶೀಲನೆಗೆ ಕಾರಣವಾಗಬೇಕು. ಮೀಸಲಾತಿ ಮೇಲಿನ ಮಿತಿಯನ್ನು ಕೂಡ ಮರುಪರಿಶೀಲಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.