ADVERTISEMENT

ಟ್ರೇನ್ 18: ಕೇಟರಿಂಗ್‌ ಸೌಲಭ್ಯಕ್ಕೆ ಹೆಚ್ಚು ಸ್ಥಳಾವಕಾಶ

ಪಿಟಿಐ
Published 9 ಜನವರಿ 2019, 19:58 IST
Last Updated 9 ಜನವರಿ 2019, 19:58 IST

ನವದೆಹಲಿ: ದೇಶದ ಅತಿ ವೇಗದ ರೈಲು ‘ಟ್ರೇನ್ 18’ನಲ್ಲಿ ಕೇಟರಿಂಗ್‌ ಸೌಲಭ್ಯಕ್ಕೆ ಸಾಕಷ್ಟು ಜಾಗ ಒದಗಿಸುವ ಸಲುವಾಗಿ, ಅದರೊಳಗಿನ ವ್ಯವಸ್ಥೆಯ ವಿನ್ಯಾಸವನ್ನು ಮಾರ್ಪಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಕೇಟರಿಂಗ್‌ ಸೌಲಭ್ಯಕ್ಕೆ ಸ್ಥಳಾವಕಾಶ ಕಡಿಮೆ ಇರುವ ಬಗ್ಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಆಕ್ಷೇಪ ವ್ಯಕ್ತಪಡಿಸಿದ್ದು, ಕಡಿಮೆ ಸ್ಥಳದಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸಲು ಸಾಧ್ಯವಾಗದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಆಹಾರ ಪದಾರ್ಥಗಳನ್ನು ಪ್ರಯಾಣಿಕರಿಗೆ ಪೂರೈಸಲು ಟ್ರಾಲಿಗಳನ್ನು ಬಳಸಿ ಅಥವಾ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಾಕಷ್ಟು ಜಾಗ ದೊರಕಿಸಿಕೊಡುವ ಭರವಸೆಯನ್ನು ಇಲಾಖೆ ನೀಡಿದೆ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.