ADVERTISEMENT

ಕೇರಳ: ಮಣಪ್ಪಾಟ್ ಫೌಂಡೇಷನ್‌ ವಿರುದ್ಧ ಸಿಬಿಐ ತನಿಖೆಗೆ ಶಿಪಾರಸು

ಎಫ್‌ಸಿಆರ್‌ಎ ಉಲ್ಲಂಘನೆ ಆರೋಪ

ಪಿಟಿಐ
Published 5 ಜನವರಿ 2026, 16:20 IST
Last Updated 5 ಜನವರಿ 2026, 16:20 IST
–
   

ತಿರುವನಂತಪುರ: ಪುನರ್ವಸತಿ ಯೋಜನೆ ಅನುಷ್ಠಾನಕ್ಕೆ ನಿಧಿ ಸಂಗ್ರಹಿಸುವ ವೇಳೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿರುವ ಎನ್‌ಜಿಒ ‘ಮಣಪ್ಪಾಟ್ ಫೌಂಡೇಷನ್‌’ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೇರಳದ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆ(ವಿಎಸಿಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಅಲ್ಲದೇ, ಮಣಪ್ಪಾಟ್ ಫೌಂಡೇಷನ್‌ ಮುಖ್ಯಸ್ಥ ಹಾಗೂ ಸಿಇಒ ಅಮೀರ್‌ ಅಹ್ಮದ್‌ ವಿರುದ್ಧವೂ ಸಿಬಿಐ ತನಿಖೆ ನಡೆಸಬೇಕು ಎಂಬ ಶಿಫಾರಸು ಉಳ್ಳ ವರದಿಯನ್ನು ವಿಎಸಿಬಿ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಸಲ್ಲಿಸಿದೆ.

ಇದೇ ಪ್ರಕರಣದಲ್ಲಿ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ವಿ.ಡಿ.ಸತೀಶನ್‌ ವಿರುದ್ಧ ಸಿಬಿಐ ತನಿಖೆ ನಡೆಸುವಂತೆಯೂ ಈಗಾಗಲೇ ವಿಎಸಿಬಿ ಶಿಫಾರಸು ಮಾಡಿದೆ.

ADVERTISEMENT

ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಹೆಸರಿನಲ್ಲಿ ವಿದೇಶಗಳಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ಆ ಹಣವನ್ನು ಅಹ್ಮದ್ ಹಾಗೂ ಸತೀಶನ್ ಅವರ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.