ADVERTISEMENT

ಸುಶಾಂತ್ ಪ್ರಕರಣದ ಸಿಬಿಐ ವರದಿ ಬಹಿರಂಗಪಡಿಸಲು ಮಹಾರಾಷ್ಟ್ರ ಗೃಹ ಸಚಿವ ಒತ್ತಾಯ

ಪಿಟಿಐ
Published 3 ಅಕ್ಟೋಬರ್ 2020, 10:59 IST
Last Updated 3 ಅಕ್ಟೋಬರ್ 2020, 10:59 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್   

ನಾಗಪುರ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಶೀಘ್ರವೇ ತನ್ನ ತನಿಖಾ ವರದಿಯನ್ನು ಸಾರ್ವಜನಿಕರ ಎದುರು ತೆರೆದಿಡಬೇಕು‘ ಎಂದು ಒತ್ತಾಯಿಸಿರುವ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್‌ಮುಖ್, ‘ಇದರಿಂದ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಜನರಿಗೆ ತಿಳಿಯುತ್ತದೆ‘ ಎಂದು ಹೇಳಿದ್ದಾರೆ.

‘ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖಾ ವರದಿಯ ನಿರೀಕ್ಷೆಯಲ್ಲಿದೆ‘ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಸುಶಾಂತ್ ಸಾವು, ಕೊಲೆಯಲ್ಲ, ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಲ್ಲಾ‘ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ನಮ್ಮ ಸರ್ಕಾರಕ್ಕೆ ಅಧಿಕೃತವಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಈ ಪ್ರಶ್ನೆಗೆ ಸೂಕ್ತ ಉತ್ತರ ಹೇಳುವುದು ಅಸಾಧ್ಯ‘ ಎಂದಿದ್ದಾರೆ. ‘ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಶೀಘ್ರದಲ್ಲೇ ಸಾರ್ವಜನಿಕರ ಎದರು ತನಿಖೆಯ ವಿವರವನ್ನು ನೀಡಬೇಕೆಂದು ನಮ್ಮ ಸರ್ಕಾರ ಬಯಸುತ್ತದೆ‘ ಎಂದು ಪುನರುಚ್ಚರಿಸಿದರು.

ADVERTISEMENT

ಒಂದು ವಾರದ ಹಿಂದೆ ‘ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯಲ್ಲಿ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಎಲ್ಲ ವಿಚಾರಗಳು ತನಿಖೆ ಹಂತದಲ್ಲಿವೆ‘ ಎಂದು ಸಿಬಿಐ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.