ADVERTISEMENT

ಸಾಲ: ಕೇರಳದ ಅರ್ಜಿ ಸಂವಿಧಾನ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 16:23 IST
Last Updated 1 ಏಪ್ರಿಲ್ 2024, 16:23 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ರಾಜ್ಯವು ಪಡೆಯಬಹುದಾದ ಸಾಲದ ಮೊತ್ತದ ಮೇಲೆ ಕೇಂದ್ರ ಸರ್ಕಾರವು ಮಿತಿ ಹೇರಿದೆ ಎಂದು ದೂರಿ ಕೇರಳ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಕೇರಳ ಸರ್ಕಾರದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ಪೀಠವು ನಡೆಸಿತು. ಕೇಂದ್ರ ಸರ್ಕಾರವು ರಾಜ್ಯದ ವಿಶೇಷ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಕೇರಳ ದೂರಿದೆ.

ರಾಜ್ಯಗಳು ಪಡೆಯುವ ಸಾಲದ ಬಗ್ಗೆ ಉಲ್ಲೇಖ ಇರುವ ಸಂವಿಧಾನದ 293ನೆಯ ವಿಧಿಯ ಬಗ್ಗೆ ಪ್ರಸ್ತಾಪಿಸಿದ ಪೀಠವು, ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಿಂದ ಇದುವರೆಗೆ ಅಧಿಕಾರಯುತವಾದ ಯಾವುದೇ ವ್ಯಾಖ್ಯಾನ ಬಂದಿಲ್ಲ ಎಂದು ಹೇಳಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.