ADVERTISEMENT

ಸೆಂಟ್ರಲ್‌ ವಿಸ್ತಾ: ನಿರ್ಮಾಣ ಕಾರ್ಯ ಆರಂಭ

ಪಿಟಿಐ
Published 15 ಜನವರಿ 2021, 8:17 IST
Last Updated 15 ಜನವರಿ 2021, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಸತ್‌ ಭವನದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಡಿಸೆಂಬರ್‌ 10ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದರು. 2022ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 75ನೇ ಸ್ವಾತಂತ್ರ್ಯೋತ್ಸವ ಅದೇ ವರ್ಷ ನಡೆಯಲಿದೆ. ಆ ವರ್ಷದ ಚಳಿಗಾಲದ ಅಧಿವೇಶವನ್ನು ನೂತನ ಸಂಸತ್‌ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

₹ 971 ಕೋಟಿ ವೆಚ್ಚದ ಈ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್‌ ಲಿ.ಗೆ ನೀಡಲಾಗಿದೆ.

ADVERTISEMENT

‘ನಿರ್ಮಾಣ ಕಾರ್ಯವು 35 ದಿನ ತಡವಾಗಿ ಆರಂಭವಾಗಿದ್ದರೂ ನಿಗದಿತ ಅವಧಿಗೂ ಮೊದಲೇ ನೂತನ ಸಂಸತ್‌ ಭವನವನ್ನು ನಿರ್ಮಿಸಲಾಗುವುದು’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.