ADVERTISEMENT

ಸೆಂಟ್ರಲ್‌ ವಿಸ್ತಾ ಪುನರ್‌ ನಿರ್ಮಾಣ: ಸಂಸದರ ಕಚೇರಿಗಾಗಿ ಎರಡು ಕಟ್ಟಡ ನೆಲಸಮ

ಪಿಟಿಐ
Published 26 ಡಿಸೆಂಬರ್ 2020, 10:27 IST
Last Updated 26 ಡಿಸೆಂಬರ್ 2020, 10:27 IST
ನೂತನ ಸಂಸತ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪೂಜೆ‍ ಸಲ್ಲಿಸಿದ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ನೂತನ ಸಂಸತ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪೂಜೆ‍ ಸಲ್ಲಿಸಿದ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಸಂಸತ್‌ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಇಲ್ಲಿನ ಪ್ರತಿಷ್ಠಿತ ಲುಟೆನ್ಸ್‌ ಪ್ರದೇಶದಲ್ಲಿರುವ ಶ್ರಮಶಕ್ತಿ ಭವನ ಮತ್ತು ಸಾರಿಗೆ ಭವನಗಳನ್ನು ಮೊದಲು ನೆಲಸಮ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶ್ರಮಶಕ್ತಿ ಭವನ ರಫಿ ಮಾರ್ಗದಲ್ಲಿದ್ದರೆ, ಸಾರಿಗೆ ಭವನವು ಸಂಸದ್‌ ಮಾರ್ಗದಲ್ಲಿದೆ. ಇದೇ ಸ್ಥಳದಲ್ಲಿ ಸಂಸದರ ಕಚೇರಿಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯ ಮಾಸ್ಟರ್‌ ಪ್ಲ್ಯಾನ್ ಸಿದ್ಧಪಡಿಸಿರುವ ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ADVERTISEMENT

ವಿವಿಧ ಸಚಿವಾಲಯಗಳ ಕಚೇರಿಗಳನ್ನು ತಾತ್ಕಾಲಿಕವಾಗಿ ಮಧ್ಯ ದೆಹಲಿಯ ಗೋಲ್ ಮಾರ್ಕೆಟ್, ಕೆ ಜಿ ಮಾರ್ಗ್, ಆಫ್ರಿಕಾ ಅವೆನ್ಯೂ ಮತ್ತು ತಾಲ್‌ಕಟೋರಾ ಸ್ಟೇಡಿಯಂಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಸಚಿವಾಲಯಗಳ ಕಾರ್ಯದಲ್ಲಿ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಹಂತ ಹಂತವಾಗಿ ಕಟ್ಟಡವನ್ನು ನೆಲಸಮ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.