ADVERTISEMENT

ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ₹100 ಹೆಚ್ಚಿಸಿದ ಕೇಂದ್ರ ಸರ್ಕಾರ

ಪಿಟಿಐ
Published 8 ಜೂನ್ 2022, 13:31 IST
Last Updated 8 ಜೂನ್ 2022, 13:31 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲಿ ಕೇಂದ್ರ ಸರ್ಕಾರ ₹100 ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರ 2022-23ರ ಬೆಳೆ ವರ್ಷಕ್ಕೆ ಅನ್ವಯವಾಗುತ್ತಿದ್ದು, ಪ್ರತಿ ಕ್ವಿಂಟಲ್ ಭತ್ತದ ಎಂಎಸ್‌ಪಿ ₹ 2,040 ಆಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ) 2022–23ರ ಬೆಳೆ ವರ್ಷದಲ್ಲಿ ಎಲ್ಲ ಕಡ್ಡಾಯ ಖಾರಿಫ್(ಬೇಸಿಗೆ) ಬೆಳೆಗಳಿಗೆ ಅನ್ವಯವಾಗುವಂತೆ ಎಂಎಸ್‌ಪಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

‘ಇಂದಿನ ಕ್ಯಾಬಿನೆಟ್ ಸಭೆಯಲ್ಲಿ 14 ಖಾರಿಫ್ ಬೆಳೆಗಳ ಎಂಎಸ್‌ಪಿಯನ್ನು ಅನುಮೋದಿಸಲಾಗಿದೆ ’ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸಾಮಾನ್ಯ ಗ್ರೇಡ್‌ನ ಭತ್ತದ ಮೇಲಿನ ಎಂಎಸ್‌ಪಿ ₹1,940 ರಿಂದ ₹ 2,040ಕ್ಕೆ ಹೆಚ್ಚಿಸಲಾಗಿದೆ. ಎ ಗ್ರೇಡ್ ಭತ್ತದ ಮೇಲಿನ ಎಂಎಸ್‌ಪಿ ₹1,960 ರಿಂದ ₹ 2,060ಕ್ಕೆ ಏರಿಸಲಾಗಿದೆ.

ಭತ್ತವು ಖಾರಿಫ್‌ನ ಪ್ರಮುಖ ಬೆಳೆಯಾಗಿದೆ. ರೈತರು ಈಗಾಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಜೂನ್–ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.