ADVERTISEMENT

ಕೋವಿಡ್ ಹೊಸ ರೂಪಾಂತರ: ಪರೀಕ್ಷೆ, ತೀವ್ರ ತಪಾಸಣೆಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 26 ನವೆಂಬರ್ 2021, 1:18 IST
Last Updated 26 ನವೆಂಬರ್ 2021, 1:18 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ನವದೆಹಲಿ: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೋವಿಡ್–19 ಹೊಸ ರೂಪಾಂತವನ್ನು ಪತ್ತೆಹಚ್ಚಿರುವುದಾಗಿ ಹೇಳಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಹೊಸದಾಗಿ ಸಲಹೆ ಸೂಚನೆಗಳನ್ನು ನೀಡಿದೆ.

ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೋಟ್ಸ್‌ವಾನಾಗಳಿಂದ ಬರುವ ಪ್ರಯಾಣಿಕರ ಪರೀಕ್ಷೆ ಹಾಗೂ ಸ್ಕ್ರೀನಿಂಗ್ ತೀವ್ರಗೊಳಿಸುವಂತೆ ಕೇಂದ್ರ ಸೂಚಿಸಿದೆ.

ಈ ಕುರಿತು ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ (ಆರೋಗ್ಯ ಇಲಾಖೆ) ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ. ಕೋವಿಡ್ ದೃಢಪಟ್ಟಿರುವ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿಯನ್ನು ‘ಜೀನೋಮ್ ಸೀಕ್ವೆನ್ಸಿಂಗ್’ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ADVERTISEMENT

ಕೋವಿಡ್–19 ಹೊಸ ರೂಪಾಂತರವನ್ನು ಪತ್ತೆಹಚ್ಚಿರುವುದಾಗಿ ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಗುರುವಾರ ಹೇಳಿದ್ದರು. ಹೊಸ ರೂಪಾಂತರವನ್ನು ಬಿ.1.1.529 ಎಂದು ಕರೆಯಲಾಗಿದೆ.

ದಕ್ಷಿಣ ಆಫ್ರಿಕಾದ ಸುಮಾರು 100 ಮಾದರಿಗಳಲ್ಲಿ ಬಿ.1.1.529 ದೃಢಪಟ್ಟಿದೆ. ಇದು ಬೋಟ್ಸ್‌ವಾನಾ ಮತ್ತು ಹಾಂಗ್‌ಕಾಂಗ್‌ನಲ್ಲೂ ಕಂಡು ಬಂದಿದೆ. ದಕ್ಷಿಣ ಆಫ್ರಿಕಾದಿಂದ ಹಾಂಗ್‌ಕಾಂಗ್‌ಗೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಈ ರೂಪಾಂತರ ಪತ್ತೆಯಾಗಿದೆ ಎಂದು ಗುರುವಾರ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.