ADVERTISEMENT

ಮದುವೆಗಳಲ್ಲಿ ಸಿನಿಮಾ ​ಹಾಡು: ಕಾಪಿರೈಟ್ ಉಲ್ಲಂಘನೆಯಾಗುವುದಿಲ್ಲ; ಕೇಂದ್ರ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2023, 7:39 IST
Last Updated 27 ಜುಲೈ 2023, 7:39 IST
ಮದುವೆ
ಮದುವೆ   ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮದುವೆಗಳಲ್ಲಿ ಸಿನಿಮಾ ​ಹಾಡುಗಳನ್ನು ಹಾಕುವುದರಿಂದ ಕಾಪಿರೈಟ್ (ಹಕ್ಕು ಸ್ವಾಮ್ಯ) ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 

ಮದುವೆ ಸಮಾರಂಭಗಳು, ಹಬ್ಬಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕಿದರೆ ಅದು ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮದುವೆ, ಹಬ್ಬದ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕಿದರೆ ಸಂಬಂಧಿಸಿದವರಿಗೆ ರಾಯಧನ ನೀಡಬೇಕು ಎಂದು ಹಲವು ಸಂಸ್ಥೆಗಳು ದೂರು ನೀಡಿದ್ದವು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.