ADVERTISEMENT

ಮಾದರಿ ಕಾರಾಗೃಹ ಕಾಯ್ದೆ ಶೀಘ್ರ ಜಾರಿ: ಅಮಿತ್‌ ಶಾ

ಪಿಟಿಐ
Published 4 ಸೆಪ್ಟೆಂಬರ್ 2022, 14:16 IST
Last Updated 4 ಸೆಪ್ಟೆಂಬರ್ 2022, 14:16 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ ಭಾನುವಾರ ನಡೆದ 6ನೇ ಅಖಿಲ ಭಾರತ ಬಂಧೀಖಾನೆ ಕರ್ತವ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು   –ಪಿಟಿಐ ಚಿತ್ರ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ ಭಾನುವಾರ ನಡೆದ 6ನೇ ಅಖಿಲ ಭಾರತ ಬಂಧೀಖಾನೆ ಕರ್ತವ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು   –ಪಿಟಿಐ ಚಿತ್ರ   

ಅಹಮದಾಬಾದ್‌: ಬ್ರಿಟಿಷ್‌ ಕಾಲದ ಕಾನೂನಿಗೆ ತಿದ್ದುಪಡಿ ಮಾಡಿ ಮಾದರಿಕಾರಾಗೃಹ ಕಾಯ್ದೆಯನ್ನು ಮುಂದಿನ ಆರು ತಿಂಗಳ ಒಳಗೆ ಜಾರಿಗೊಳಿಸಲಾಗುವುದು. ಅದಕ್ಕಾಗಿ ರಾಜ್ಯ ಸರ್ಕಾರಗಳ ಜೊತೆ ವಿವರವಾದ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ತಿಳಿಸಿದರು.

ಇಲ್ಲಿ ನಡೆದ 6ನೇ ಅಖಿಲ ಭಾರತಕಾರಾಗೃಹ ಕರ್ತವ್ಯ ಮೇಳದಲ್ಲಿ ಭಾಗವಹಿಸಿದ್ದ ಅವರು ಈ ಮಾತುಗಳನ್ನಾಡಿದರು. ಕೇಂದ್ರ ಸರ್ಕಾರವು 2016ರಲ್ಲಿ ಪರಿಚಯಿಸಿರುವ ಮಾದರಿ ಕಾರಾಗೃಹಕೈಪಿಡಿಯನ್ನು ಕೂಡಲೇ ಅಂಗೀಕರಿಸುವಂತೆ ಮತ್ತು ಕಾರಾಗೃಹಕುರಿತ ನಿಲುವುಗಳನ್ನು ವಿಮರ್ಶೆಗೆ ಒಡ್ಡುವಂತೆ ರಾಜ್ಯ ಸರ್ಕಾರಗಳಿಗೆ ಅವರು ಹೇಳಿದರು. ಈ ವರೆಗೂ ಕೇವಲ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಈ ಕೈಪಿಡಿಯನ್ನು ಆಂಗೀಕರಿಸಿವೆ. ಕಾರಾಗೃಹ ಕೈಪಿಡಿ ನಂತರ ಕಾರಾಗೃಹ ಕಾಯ್ದೆ ರೂಪಿಸಲು ಮುಂದಾಗಿರುವುದಾಗಿ ಹೇಳಿದರು.

ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ಜೈಲುಗಳಲ್ಲಿ ಇರಿಸಲಾಗುತ್ತಿದೆ. ಕಾನೂನಿನಲ್ಲಿ ತಿದ್ದುಪಾಡು ತರದೇ ಇಂಥ ಜೈಲು ಆಡಳಿತಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಕೋರ್ಟ್‌ ಜೊತೆ ವಿಡಿಯೊ ಕಾನ್ಫರೆನ್ಸ್‌ ನಡೆಸಲು ಎಲ್ಲಾ ಜಿಲ್ಲಾ ಜೈಲುಗಳಲ್ಲೂ ಸೌಲಭ್ಯ ಕಲ್ಪಿಸುವಂತೆ ಅವರು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.