ADVERTISEMENT

ಸೇವಾ ಪುಸ್ತಕ ಅಧ್ಯಯನ ಮಾಡಿ ಅದಕ್ಷ, ಭ್ರಷ್ಟ ನೌಕರರ ಅವಧಿಪೂರ್ವ ನಿವೃತ್ತಿಗೆ ಸೂಚನೆ

ಎಲ್ಲ ಇಲಾಖೆಗಳಿಗೆ ಕೇಂಧ್ರ ಸರ್ಕಾರ ಸೂಚನೆ

ಪಿಟಿಐ
Published 30 ಆಗಸ್ಟ್ 2020, 14:19 IST
Last Updated 30 ಆಗಸ್ಟ್ 2020, 14:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 30 ವರ್ಷ ಸೇವೆ ಪೂರೈಸಿರುವ ನೌಕರರ ಸೇವಾಪುಸ್ತಕ ಪರಾಮರ್ಶೆ ನಡೆಸಬೇಕು. ಅದಕ್ಷ ಹಾಗೂ ಭ್ರಷ್ಟ ನೌಕರರನ್ನು ಗುರುತಿಸಿ, ಅವರಿಗೆ ಅವಧಿಪೂರ್ವ ನಿವೃತ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಬ್ಬಂದಿ ಸಚಿವಾಲಯ ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

‘ಅವಧಿಪೂರ್ವ ನಿವೃತ್ತಿ ನೀಡುವುದನ್ನು ದಂಡ ವಿಧಿಸುವುದು ಎಂಬುದಾಗಿ ಅರ್ಥೈಸಬಾರದು. ಇದು ಕಡ್ಡಾಯ ನಿವೃತ್ತಿಯೂ ಆಗದು’ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.

ADVERTISEMENT

ಅದಕ್ಷ, ಭ್ರಷ್ಟರೆಂದು ಗುರುತಿಸಲಾಗುವ ನೌಕರರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಅವಧಿಪೂರ್ವ ನಿವೃತ್ತಿ ನೀಡಲುಕೇಂದ್ರ ನಾಗರಿಕ ಸೇವಾ ನಿಯಮಗಳಡಿ ಸಂಬಂಧಪಟ್ಟ ಇಲಾಖೆಗೆ ಅಧಿಕಾರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.