ADVERTISEMENT

ರಾಷ್ಟ್ರಪತಿ ಭವನದಲ್ಲಿ ಟ್ರಂಪ್‌ಗೆ ಅದ್ದೂರಿ ಸ್ವಾಗತ

ಏಜೆನ್ಸೀಸ್
Published 25 ಫೆಬ್ರುವರಿ 2020, 5:35 IST
Last Updated 25 ಫೆಬ್ರುವರಿ 2020, 5:35 IST
ರಾಷ್ಟ್ರಪತಿ ಭವನದಲ್ಲಿ ಪತ್ನಿ ಮೆಲೇನಿಯಾ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಪತ್ನಿ ಮೆಲೇನಿಯಾ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇದ್ದಾರೆ.   
""

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಅದ್ಧೂರಿ ಸ್ವಾಗತ ದೊರೆಯಿತು.

ಪತ್ನಿ ಮೆಲೇನಿಯಾ ಅವರೊಂದಿಗೆ ರಾಷ್ಟ್ರಪತಿ ಭವನಕ್ಕೆ ತಮ್ಮ ‘ದಿ ಬೀಸ್ಟ್‌’ ಕಾರ್‌ನಲ್ಲಿ ಬಂದ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದ ಅಂಗರಕ್ಷಕ ಪಡೆ ಬೆಂಗಾವಲಾಗಿತ್ತು.

ಪತ್ನಿ ಸವಿತಾ ಕೋವಿಂದ್‌ ಅವರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಟ್ರಂಪ್‌ ಅವರನ್ನು ಸ್ವಾಗತಿಸಿದರು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಸಹ ಉಪಸ್ಥಿತರಿದ್ದರು.

ADVERTISEMENT

ರಾಷ್ಟ್ರಪತಿ ಭವನದಿಂದ ಟ್ರಂಪ್ ರಾಜ್‌ಘಾಟ್‌ಗೆ ತೆರಳಿ,ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ರಾಜ್‌ಘಾಟ್‌ನಲ್ಲಿ ತಮ್ಮ ಭೇಟಿಯ ನೆನಪಿಗೆಗಿಡವೊಂದನ್ನು ನೆಟ್ಟರು.

ಟ್ರಂಪ್‌ ಅವರಿಗೆ ಭಾರತದ ಮೂರೂ ಸಶಸ್ತ್ರಪಡೆಗಳು ಗೌರವವಂದನೆ ಸಲ್ಲಿಸಿದವು. ರಾಷ್ಟ್ರಪತಿ ಭವನದ ಟ್ವಿಟರ್‌ ಖಾತೆಯಲ್ಲಿ ಟ್ರಂಪ್ ಭೇಟಿಯ ವಿಡಿಯೊ ಲೈವ್‌ ಸ್ಟ್ರೀಮಿಂಗ್ ಇತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ಆರೋಗ್ಯ ಸಚಿವ ಹರ್ಷವರ್ಧನ್, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಮತ್ತು ಮೂರೂ ಸಶಸ್ತ್ರಪಡೆಗಳು ದಂಡನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಟ್ರಂಪ್ ದಂಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.