ADVERTISEMENT

ಚಂದ್ರಯಾನ 2 ಉಡ್ಡಯನ: 2.43ಕ್ಕೆ ನಭಕ್ಕೆ ಚಿಮ್ಮಿತು ’ಬಾಹುಬಲಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 10:16 IST
Last Updated 22 ಜುಲೈ 2019, 10:16 IST
   

ಚೆನ್ನೈ:ಚಂದ್ರಯಾನ–2ರ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿರುವ ರಾಕೆಟ್ ‘ಬಾಹುಬಲಿ’ ಮಧ್ಯಾಹ್ನ 2.43ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆಎಂದುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ತಿಳಿಸಿದೆ.

3.06 – ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆಯನ್ನು ಕಾದು ನೋಡುತ್ತಿದ್ದ ಜನರು ಬಾಹುಬಲಿ ನಭಕ್ಕೆ ಚಿಮ್ಮಿದಾಕ್ಷಣ ಸಂಭ್ರಮಾಚರಣೆ ಮಾಡಿದರು.

2.45 –ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ–2ರ ನೌಕೆಗಳನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್‌–2 ರಾಕೆಟ್ ನಭಕ್ಕೆ ಜಿಗಿಯಿತು. ಲೈವ್ ವಿಡಿಯೊ ಇಲ್ಲಿ ನೋಡಿ...

ADVERTISEMENT

2.35– ಇಸ್ರೋದ ಮಹತ್ವಾಕಾಂಕ್ಷೆಯಚಂದ್ರಯಾನ-2 ಯೋಜನೆಯ ಭಾಗವಾಗಿರುವ ಆರ್ಬಿಟರ್‌, ಲ್ಯಾಂಡರ್‌, ರೋವರ್‌ಗಳು ಉಡಾವಣೆಗೆ ಸಜ್ಜಾಗಿವೆ.ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನುಹೊತ್ತು ನಭಕ್ಕೆ ನೆಗೆಯಲಿದೆ. ಸೆಪ್ಟೆಂಬರ್‌ ವೇಳೆಗೆ ಆರ್ಬಿಟರ್‌ ಚಂದ್ರನ ಆವರಣ ತಲುಪಲಿದೆ.

2.30ಬಾಹುಬಲಿ ಯಾನಕ್ಕೆ ಶರುವಾಗಿದೆ ಕ್ಷಣಗಣನೆ

2.10– ಜಿಎಸ್‌ಎಲ್‌ವಿಎಂಕೆ3 ಕ್ರಯೋಜನಿಕ್‌ ಎಂಜಿನ್‌ಗೆ ಹೈಡ್ರೋಜನ್‌ ಇಂಧನ ಭರ್ತಿ ಮಾಡುವ ಕೆಲಸ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.