ADVERTISEMENT

5500 ಇ–ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ

ಪಿಟಿಐ
Published 31 ಜನವರಿ 2026, 15:41 IST
Last Updated 31 ಜನವರಿ 2026, 15:41 IST
ಎನ್‌.ಚಂದ್ರಬಾಬು ನಾಯ್ಡು
ಎನ್‌.ಚಂದ್ರಬಾಬು ನಾಯ್ಡು   

ಕುಪ್ಪಂ (ಆಂಧ್ರಪ್ರದೇಶ): ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಶನಿವಾರ ಚಿತ್ತೂರು ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ ಮಹಿಳೆಯರಿಗೆ 5,500 ಇ–ಸೈಕಲ್‌ಗಳನ್ನು ವಿತರಿಸಿ, ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 

ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ 5555 ಇ–ಸೈಕಲ್‌ಗಳನ್ನು ವಿತರಿಸಲಾಗಿದೆ. ಇವು ಮಹಿಳೆಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದರ ಜತೆಗೆ ಅವರಿಗೆ ಮಾಸಿಕವಾಗಿ ₹1500 ಉಳಿತಾಯ ಮಾಡಲು ಸಹಕಾರಿಯಾಗುತ್ತವೆ. ಅಲ್ಲದೇ, ಪರಿಸರ ಸುಸ್ಥಿರತೆಯನ್ನೂ ಉತ್ತೇಜಿಸುತ್ತವೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.  

ಇ–ಮೊಟರೇಡ್‌ ಸಂಸ್ಥೆಯು ಸೈಕಲ್‌ಗಳನ್ನು ‍ಪೂರೈಸಿದ್ದು, ಕುಪ್ಪಂನಲ್ಲಿ ಅವುಗಳ ಜೋಡಣೆ ಕಾರ್ಯ ನಡೆದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ ಈ ಸೈಕಲ್‌ನಲ್ಲಿ 60 ಕಿ.ಮೀ. ಕ್ರಮಿಸಬಹುದಾಗಿದೆ ಎಂದೂ ನಾಯ್ಡು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರೂ ಇ–ಸೈಕಲ್‌ನಲ್ಲಿ ಒಂದು ಸುತ್ತು ಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.