ADVERTISEMENT

ಬೆಂಗಳೂರಿನಲ್ಲಿ ₹136 ಕೋಟಿ ಆಸ್ತಿ ಇ.ಡಿ ಮುಟ್ಟುಗೋಲು

ಮನೆ ಖರೀದಿ ಗ್ರಾಹಕರಿಗೆ ಭಾರಿ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:56 IST
Last Updated 4 ಜುಲೈ 2022, 13:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಮನೆ ಖರೀದಿದಾರರಿಗೆ ವಂಚಿಸಿದ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಸುಮಾರು ₹137 ಕೋಟಿ ಮೌಲ್ಯದ ಆಸ್ತಿ ಮತ್ತು ವಾಸದ ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಸೋಮವಾರ ಹೇಳಿದೆ.

ಈ ಆಸ್ತಿ ಡ್ರೀಮ್ಜ್‌ ಇನ್ಫ್ರಾ ಇಂಡಿಯಾ ಲಿಮಿಟೆಡ್‌ ಮತ್ತು ಇದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ದಿಶಾ ಚೌಧರಿ, ಟಿಜಿಎಸ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಇದರ ವ್ಯವಸ್ಥಾಪಕ ನಿರ್ದೇಶಕ ಮನದೀಪ್‌ ಕೌರ್‌ ಹಾಗೂ ಇತರರಿಗೆ ಸೇರಿದ್ದಾಗಿದೆ.

ಗೃಹ ಕಲ್ಯಾಣ್‌ ಮತ್ತು ಸಚಿನ್‌ ನಾಯ್ಕ್‌ ಅಲಿಯಾಸ್‌ ಯೋಗೇಶ್‌, ದಿಶಾ ಚೌಧರಿ, ಮನ್‌ದೀಪ್‌ ಕೌರ್‌ ಹಾಗೂ ಇತರರ ವಿರುದ್ಧದಾಖಲಾದ 125 ಎಫ್‌ಐಆರ್‌ಗಳ ವಿಚಾರಣೆ ಆರಂಭಿಸಿದ ನಂತರ, ಆರೋಪಿಗಳ ವಿರುದ್ಧಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಪ್ರಕರಣವನ್ನು ಇ.ಡಿ ದಾಖಲಿಸಿದೆ.

ADVERTISEMENT

‘ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತ ಕೈಗೆಟುಕುವ ಬೆಲೆಯಲ್ಲಿ ಫ್ಲಾಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿ, ಸಾರ್ವಜನಿಕರಿಂದ ಭಾರಿ ಮೊತ್ತದ ಹಣ ಪಡೆದು ವಂಚಿಸಿದ್ದಾರೆ.2011-12ರಿಂದ 2016-17ರವರೆಗೆ, ಆರೋಪಿಗಳು 10,299ಕ್ಕೂ ಹೆಚ್ಚು ಗ್ರಾಹಕರಿಂದ ₹722 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ. ಈ ಹಣವನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಫ್ಲಾಟ್‌ಗಳನ್ನು ಹಸ್ತಾಂತರಿಸದೆ ಮತ್ತು ಠೇವಣಿ ಮರುಪಾವತಿಸದೆ ವಂಚಿಸಿದ್ದಾರೆ’ ಎಂದು ಇ.ಡಿ ಹೇಳಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ 16 ಸ್ಥಿರಾಸ್ತಿಗಳನ್ನು ವಶಪಡಿಸಿಕೊಳ್ಳಲುಜೂನ್‌ 27ರಂದು ಆದೇಶ ಹೊರಡಿಸಲಾಗಿತ್ತುಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.