ADVERTISEMENT

ಪೆಗಾಸಸ್‌: ಎನ್‌ವೈಟಿಗೆ ನೋಟಿಸ್ ನೀಡಿದ ಚೆನ್ನೈ ವಕೀಲ

ವಾರದೊಳಗೆ ಕ್ಷಮೆ ಯಾಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 16:12 IST
Last Updated 2 ಫೆಬ್ರುವರಿ 2022, 16:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಇಸ್ರೇಲ್‌ನಿಂದ ಪೆಗಾಸಸ್‌ ಬೇಹುಗಾರಿಕೆ ಕುತಂತ್ರಾಂಶವನ್ನು ಭಾರತವು ಖರೀದಿಸಿದೆ ಎಂಬ ವರದಿ ಪ್ರಕಟಿಸಿರುವ ‘ದ ನ್ಯೂಯಾರ್ಕ್‌ ಟೈಮ್ಸ್‌’ಗೆ (ಎನ್‌ವೈಟಿ) ಚೆನ್ನೈನ ವಕೀಲ ಎಂ.ಶ್ರೀನಿವಾಸನ್‌ ಎಂಬುವವರು ನೋಟಿಸ್‌ ನೀಡಿದ್ದಾರೆ.

‘ದುರುದ್ದೇಶಪೂರಿತ ಹಾಗೂ ಹಾನಿಕರ ವರದಿ ಪ್ರಕಟಿಸುವ ಮೂಲಕ ಪತ್ರಿಕೆಯು ದೇಶದ ಘನತೆಗೆ ಧಕ್ಕೆ ತಂದಿದೆ’ ಎಂದು ಅವರು ಪತ್ರಿಕೆಯ ಸಂಪಾದಕೀಯ ಮಂಡಳಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ನೋಟಿಸ್‌ ತಲುಪಿದ ವಾರದೊಳಗಾಗಿ ಕ್ಷಮೆ ಕೇಳಬೇಕು ಹಾಗೂ ಅದನ್ನು ಮುಖಪುಟದಲ್ಲಿ ಪ್ರಕಟಿಸಬೇಕು, ₹ 100 ಕೋಟಿ ಪರಿಹಾರ ನೀಡಬೇಕು’ ಎಂದು ಅವರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ADVERTISEMENT

‘ಭಾರತ ಮತ್ತು ಇಸ್ರೇಲ್‌ ನಡುವೆ 2017ರಲ್ಲಿ ನಡೆದ ರಕ್ಷಣಾ ಸಾಮಗ್ರಿ ಮತ್ತು ಗುಪ್ತಚರ ಸಾಧನಗಳ ಖರೀದಿ ಒಪ್ಪಂದದಲ್ಲಿ ಪೆಗಾಸಸ್‌ ಕುತಂತ್ರಾಂಶವು ಮುಖ್ಯವಾಗಿತ್ತು’ ಎಂಬ ತನಿಖಾ ವರದಿಯನ್ನು ಎನ್‌ವೈಟಿ ಪ್ರಕಟಿಸಿದೆ. ಆದರೆ, ಈ ವರದಿ ಸಮರ್ಥನೀಯ ಅಲ್ಲ ಅಥವಾ ಕುತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಎನ್‌ಎಸ್‌ಒ ಗ್ರೂಪ್‌ ಈ ವರದಿಯನ್ನು ದೃಢೀಕರಿಸಿಯೂ ಇಲ್ಲ ಎಂದು ವಕೀಲ ಶ್ರೀನಿವಾಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.