ಪೊಲೀಸ್ ಸಿಬ್ಬಂದಿ
–ಪಿಟಿಐ ಚಿತ್ರ
ಬಸ್ತಾರ್: ಛತ್ತೀಸಗಢದ ಐದು ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ ಒಟ್ಟು 66 ನಕ್ಸಲರು ಗುರುವಾರ ಶರಣಾಗಿದ್ದಾರೆ. ಈ ಪೈಕಿ 49 ನಕ್ಸಲರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹2.27 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 66 ಮಂದಿಯ ಪೈಕಿ 27 ಮಹಿಳಾ ನಕ್ಸಲರೂ ಇದ್ದಾರೆ.
‘ಮುಗ್ಧ ಬುಡಕಟ್ಟು ಜನರ ಮೇಲೆ ನಕ್ಸಲರು ದೌರ್ಜನ್ಯ ಎಸಗುತ್ತಿದ್ದಾರೆ. ನಕ್ಸಲರು ನಂಬಿಕೊಂಡಿರುವ ಸಿದ್ಧಾಂತವು ಟೊಳ್ಳಾಗಿದೆ. ಜೊತೆಗೆ ನಕ್ಸಲರ ವಿವಿಧ ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಆದ್ದರಿಂದ ನಾವು ಶರಣಾಗುತ್ತಿದ್ದೇವೆ ಎಂಬುದಾಗಿ ನಕ್ಸಲರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಶರಣಾದ ನಕ್ಸಲರಿಗೆ ಸರ್ಕಾರವು ನೀಡುತ್ತಿರುವ ಪುರ್ನವಸತಿ ಯೋಜನೆಗಳಿಂದಲೂ ಆಕರ್ಷಿತರಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.