ADVERTISEMENT

ಐಇಡಿ ಸ್ಫೋಟ: ಸಿಆರ್‌ಪಿಎಫ್‌ ಎಎಸ್‌ಐಗೆ ಗಾಯ

ಪಿಟಿಐ
Published 14 ಜನವರಿ 2023, 11:36 IST
Last Updated 14 ಜನವರಿ 2023, 11:36 IST
.
.   

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯ ಪೆಗ್ಡಾಪಲ್ಲಿ ಗ್ರಾಮದಲ್ಲಿ ನಕ್ಸಲರು ಇರಿಸಿದ್ದಾರೆ ಎನ್ನಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಎಎಸ್‌ಐ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡ ಎಎಸ್‌ಐ ಮುಹಮ್ಮದ್ ಅಸ್ಲಾಮ್ ಅವರನ್ನು ಬಾಸಾಗುಡಾದಲ್ಲಿರುವ ಸಿಆರ್‌ಪಿಎಫ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಹಮ್ಮದ್ ಅವರ ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಪುರಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಿಆರ್‌ಪಿಎಫ್‌ನ 153ನೇ ಬೆಟಾಲಿಯನ್‌ನ ತಂಡವು ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.