ADVERTISEMENT

ದಾಂತೇವಾಡದಲ್ಲಿ ಎನ್‌ಕೌಂಟರ್‌, ಮಹಿಳಾ ನಕ್ಸಲ್‌ ಸಾವು

ಪಿಟಿಐ
Published 31 ಮೇ 2021, 5:47 IST
Last Updated 31 ಮೇ 2021, 5:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾಂತೇವಾಡ: ‘ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಮಹಿಳಾ ನಕ್ಸಲ್‌ ಮೃತಪಟ್ಟಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಗೀದಂ ಪೊಲೀಸ್ ಠಾಣಾ ವ್ಯಾಪ್ತಿಯ ಗುಮಾಲ್ನರ್ ಗ್ರಾಮದ ಬಳಿ ಬೆಳಿಗ್ಗೆ 6.30ರ ಸುಮಾರಿಗೆ ಜಿಲ್ಲಾ ಪೊಲೀಸ್‌ ಮೀಸಲು ಪಡೆ(ಡಿಆರ್‌ಜಿ) ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಪಲ್ಲವ ಮಾಹಿತಿ ನೀಡಿದರು.

‘ಈ ವೇಳೆ ಮಹಿಳಾ ನಕ್ಸಲರೊಬ್ಬರು ಮೃತಪಟ್ಟಿದ್ದು, ಅವರನ್ನು ವೈಕೋ ಪೆಕ್ಕೊ ಎಂದು ಗುರುತಿಸಲಾಗಿದೆ. ಇನ್ನುಳಿದ ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ ಸುಧಾರಿತ ಸ್ಫೋಟಕ ಸಾಮಗ್ರಿಗಳು (ಐಇಡಿ), ಔಷಧಿಗಳು, ದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿವೆ’ ಎಂದು ಅವರು ಹೇಳಿದರು.

ADVERTISEMENT

ವೈಕೋ ಪೆಕ್ಕೊ, ಬಿಜಾಪುರ ಜಿಲ್ಲೆಯ ಬೈರಂಗಢ ಪ್ರದೇಶದಲ್ಲಿ ಸಕ್ರಿಯವಾಗಿರುವ ಪೀಪಲ್ಸ್‌ ಲಿಬರೇಷನ್‌ ಆಫ್‌ ಆರ್ಮಿಗೆ (ಪಿಎಲ್‌ಜಿಎ) ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.