ADVERTISEMENT

ನಕ್ಸಲ್‌ ದಾಳಿ: ಗಾಯಾಳು ಯೋಧರ ಆರೋಗ್ಯ ವಿಚಾರಿಸಿದ ಅಮಿತ್‌ ಶಾ, ಭೂಪೇಶ್‌ ಬಘೇಲ್

ಏಜೆನ್ಸೀಸ್
Published 5 ಏಪ್ರಿಲ್ 2021, 14:48 IST
Last Updated 5 ಏಪ್ರಿಲ್ 2021, 14:48 IST
ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ, ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ, ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ರಾಯ್‌ಪುರ:ಛತ್ತೀಸಗಡದ ಸುಕ್ಮಾ-ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿ ವೇಳೆ ಗಾಯಗೊಂಡಿದ್ದ ಯೋಧರ ಆರೋಗ್ಯ ವಿಚಾರಿಸಲು ಇಲ್ಲಿನ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿದರು. ಅವರೊಂದಿಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೂ ಇದ್ದರು.

ಇದಕ್ಕೂ ಮೊದಲು ಈ ಇಬ್ಬರು ನಾಯಕರು ದಾಳಿ ವೇಳೆ ಮೃತಪಟ್ಟಿದ್ದ ಯೋಧರ ಶವಪೆಟ್ಟಿಗೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದರು.ಬಳಿಕ ಸಭೆ ನಡೆಸಿದ್ದರು. ಈ ಕುರಿತುಮಾತನಾಡಿದ್ದ ಶಾ, 'ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹಾಗೂ ರಕ್ಷಣಾ ಪಡೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದೇನೆ.ಈ ಹೋರಾಟವು ದುರ್ಬಲಗೊಳ್ಳಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸೈನಿಕರ ಸ್ಥೈರ್ಯವನ್ನು ತೋರಿಸುತ್ತದೆ'ಎಂದುಹೇಳಿದ್ದರು.

ಬಿಜಾಪುರ ಜಿಲ್ಲೆಯಲ್ಲಿರುವ ಸಿಆರ್‌ಪಿಎಫ್‌ ಶಿಬಿರರಕ್ಕೂ ಅವರು ಭೇಟಿ ನೀಡಿದರು.

ADVERTISEMENT

ಸುಕ್ಮಾ-ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿ ವೇಳೆ 22 ಮಂದಿ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದರು. 30ಕ್ಕೂ ಹೆಚ್ಚುಯೋಧರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.