
ಪ್ರಾತಿನಿಧಿಕ ಚಿತ್ರ
ಇಟಾನಗರ: ಕಳೆದ ಆರು ತಿಂಗಳಲ್ಲಿ ದೇಶದಾದ್ಯಂತ ಸುಮಾರು 26,000 ಪ್ರಕರಣಗಳನ್ನು ವಿಲೇವಾರಿ ಮಾಡಿ 2,300 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಹೇಳಿದೆ.
ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕೇವಲ ಅಂಕಿಅಂಶಗಳಲ್ಲ, ಪ್ರತಿಯೊಂದು ಪ್ರಕರಣವೂ ಒಂದು ಮಗು ಮತ್ತು ಒಂದು ಕುಟುಂಬದ ಕಥೆಯನ್ನು ಪ್ರತಿನಿಧಿಸುತ್ತದೆ ಎಂದು ಬಾಲ ನ್ಯಾಯ, ಪೋಕ್ಸೊ ಮತ್ತು ಎನ್‌ಸಿಪಿಸಿಆರ್‌ನ ವಿಶೇಷ ಕೋಶಗಳ ವಿಭಾಗದ ಮುಖ್ಯಸ್ಥ ಪರೇಶ್ ಶಾ ಹೇಳಿದ್ದಾರೆ.
ರಕ್ಷಿಸಿದ ಮಕ್ಕಳ ಪೈಕಿ 1 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಅವರ ತವರು ಜಿಲ್ಲೆಗೆ ವಾಪಸ್ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದ, ಮಕ್ಕಳ ಹಕ್ಕುಗಳ ಬದ್ಧತೆಗಳನ್ನು ಅರಿತುಕೊಳ್ಳುವ ಜವಾಬ್ದಾರಿ ಅಧಿಕಾರಿಗಳು, ಶಾಲಾ ಅಧಿಕಾರಿಗಳಿಂದ ಹಿಡಿದು ಕಾನೂನು ಜಾರಿ ಮಾಡುವವರ ಮತ್ತು ನಾಗರಿಕ ಸಮಾಜದವರೆಗೆ ಎಲ್ಲರ ಮೇಲಿದೆ ಎಂದು ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.