ADVERTISEMENT

ಚೀನಾ ಕೃತ್ಯ ಎದುರಿಸಲು ಸೇನೆ ಸಮರ್ಥ: ಬಿಪಿನ್‌ ರಾವತ್‌

ಪಿಟಿಐ
Published 14 ಡಿಸೆಂಬರ್ 2020, 19:30 IST
Last Updated 14 ಡಿಸೆಂಬರ್ 2020, 19:30 IST
ಬಿಪಿನ್‌ ರಾವತ್
ಬಿಪಿನ್‌ ರಾವತ್   

ಕೋಲ್ಕತ್ತ: ‘ಲಡಾಖ್‌ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟಿನ ನಡುವೆಯೇ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಚೀನಾದ ಕೃತ್ಯಗಳನ್ನು ಎದುರಿಸಲು ಭಾರತದ ಪಡೆಗಳು ಸಮರ್ಥವಾಗಿವೆ’ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಸೋಮವಾರ ಹೇಳಿದ್ದಾರೆ.

‘ಚೀನಾದಂತೆ ನಾವು ಕೂಡ ನಮ್ಮ ಸ್ವಾಯತ್ತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಆ ರಾಷ್ಟ್ರಕ್ಕೆ ಎದಿರೇಟು ನೀಡಲು ನಾವು ತಯಾರಾಗಿದ್ದೇವೆ. ದೇಶದ ಗಡಿಯನ್ನು ಕಾಪಾಡಲು ನಮ್ಮ ಸೈನಿಕರು ಕಟಿಬದ್ಧರಾಗಿದ್ದಾರೆ’ ಎಂದೂ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT