ADVERTISEMENT

ಚೀನಾದಲ್ಲಿ ಆಸ್ಟ್ರೇಲಿಯಾ ಪತ್ರಕರ್ತೆಯ ಬಂಧನ

ಏಜೆನ್ಸೀಸ್
Published 8 ಫೆಬ್ರುವರಿ 2021, 14:11 IST
Last Updated 8 ಫೆಬ್ರುವರಿ 2021, 14:11 IST
   

ಕ್ಯಾನ್‌ಬೆರಾ: ದೇಶದ ಆಂತರಿಕ ಗೌಪ್ಯತೆಯನ್ನು ಬಹಿರಂಗಪಡಿಸುತ್ತಿದ್ದ ಆರೋಪದ ಮೇಲೆ ಚೀನಾದಲ್ಲಿ ಜನಿಸಿದ್ದ ಆಸ್ಟ್ರೇಲಿಯಾದಪತ್ರಕರ್ತೆಯೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ತಿಳಿಸಿದೆ.

ಚೀನಾ ಸೆಂಟ್ರಲ್‌ ಟೆಲಿವಿಷನ್‌ನ ವಾಹಿನಿ ಸಿಜಿಟಿಎನ್‌ ವರದಿಗಾರ್ತಿಯಾಗಿದ್ದ ಚೆಂಗ್ ಲೀ ರನ್ನು ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಆಕೆಯನ್ನು ವಶಕ್ಕೆ ಪಡೆದ ಆರು ತಿಂಗಳ ಬಳಿಕ ಬಂಧಿಸಲಾಗಿದ್ದು, ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಆಕೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು. ಜೊತೆಗೆ, ಆಕೆಯ ಚಲನವಲನಗಳನ್ನುಗಮನಿಸಲಾಗುತ್ತಿತ್ತು ಎಂದು ಸಚಿವ ಮರಿಸೆ ಪಾಯ್ನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಚೀನಾದ ವಿದೇಶಾಂಗ ಸಚಿವಾಲಯವೂ ಚೆಂಗ್ ಅವರ ಬಂಧನವನ್ನು ದೃಢಪಡಿಸಿದೆ. ಆಕೆಗೆ ಕಾನೂನು ಹಕ್ಕುಗಳು ನಿಶ್ಚಿತವಾಗಿ ದೊರೆಯಲಿವೆ ಎಂದು ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.