ADVERTISEMENT

ಚಿನ್ಮಯಾನಂದ ಪ್ರಕರಣ: ಯಾರು ಯಾರನ್ನು ಶೋಷಿಸಿದ್ದಾರೆಂಬ ನಿರ್ಣಯ ಕಷ್ಟ ಎಂದ ಕೋರ್ಟ್‌

ಪಿಟಿಐ
Published 4 ಫೆಬ್ರುವರಿ 2020, 14:32 IST
Last Updated 4 ಫೆಬ್ರುವರಿ 2020, 14:32 IST
   

ಅಲಹಾಬಾದ್: ‘ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಸ್ವಾಮಿಚಿನ್ಮಯಾನಂದಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಪ್ರಕರಣದಲ್ಲಿ ಯಾರು ಯಾರನ್ನು ಶೋಷಿಸಿದ್ದಾರೆ ಎನ್ನುವುದನ್ನು ನಿರ್ಣಯಿಸುವುದು ಕಷ್ಟ’ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿದೆ.

‘ವಾಸ್ತವವಾಗಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಬಳಸಿಕೊಂಡಿದ್ದಾರೆ’ ಎಂದು ಸೋಮವಾರ ಸ್ವಾಮಿಚಿನ್ಮಯಾನಂದಅವರಿಗೆ ಜಾಮೀನು ನೀಡುವ ವೇಳೆನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಹೇಳಿದ್ದಾರೆ.

ನಂತರ ನ್ಯಾಯಾಧೀಶರು ಪ್ರಕರಣವನ್ನು ಲಖನೌ ನ್ಯಾಯಾಲಯಕ್ಕೆ ವರ್ಗಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.