ADVERTISEMENT

ಪಾಟ್ನಾ: ಪ್ರತಿಭಟನೆ ನಡೆಸುತ್ತಿದ್ದ ಚಿರಾಗ್ ಪಾಸ್ವಾನ್ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 13:39 IST
Last Updated 15 ಫೆಬ್ರುವರಿ 2022, 13:39 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ಪಾಟ್ನಾ: ಪಕ್ಷದ ಕಾರ್ಯಕರ್ತರ ಜೊತೆ ಪ್ರತಿಭಟನೆ ನಡೆಸುತ್ತಿದ್ದ ಲೋಕ ಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಅವರನ್ನು ಬಂಧಿಸಲಾಗಿದೆ.

ಬಿಹಾರದಲ್ಲಿ ಹೆಚ್ಚಿರುವ ನಿರುದ್ಯೋಗದ ವಿಷಯವನ್ನು ಮುಂದಿಟ್ಟುಕೊಂಡು ಪಾಸ್ವಾನ್ ಕಾರ್ಯಕರ್ತರ ಜೊತೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭ ಲಾಠಿ ಪ್ರಹಾರ ನಡೆಸಿರುವ ಪೊಲಿಸರು ಪಾಸ್ವಾನ್ ಅವರನ್ನು ಬಂಧಿಸಿದ್ದಾರೆ.

ಗಾಂಧಿ ಮೈದಾನದ ಬಳಿಯ ಜೆ.ಪಿ. ವೃತ್ತದ ಬಳಿ ಆರಂಭವಾದ ಮೆರವಣಿಗೆ ರಾಜಭವನಕ್ಕೆ ತೆರಳಲು ಉದ್ದೇಶಿಸಲಾಗಿತ್ತು. ದಕ್ ಬಾಂಗ್ಲಾ ಮತ್ತು ತೆರಿಗೆ ಕಚೇರಿ ಬಳಿ ಪ್ರತಿಭಟನಾಕಾರರಿಗೆ ತಡೆಯೊಡ್ಡಲು ಪೊಲೀಸರು ಮುಂದಾದರು. ಆದರೆ, ಪೊಲೀಸರಿಗೂ ಜಗ್ಗದೆ ಮೆರವಣಿಗೆ ಮುಂದುವರಿದಿತ್ತು. ಈ ಸಂದರ್ಭ, ಪಾಸ್ವಾನ್ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.