ADVERTISEMENT

ಮೆಹುಲ್ ಚೋಕ್ಸಿ ಬಂಧನ ಭಾರತದ ರಾಜತಾಂತ್ರಿಕತೆಯ ಗೆಲುವು: ಕಾನೂನು ಸಚಿವ ಮೇಘವಾಲ್‌ 

ಪಿಟಿಐ
Published 14 ಏಪ್ರಿಲ್ 2025, 10:42 IST
Last Updated 14 ಏಪ್ರಿಲ್ 2025, 10:42 IST
<div class="paragraphs"><p>ಮೆಹುಲ್ ಚೋಕ್ಸಿ</p></div>

ಮೆಹುಲ್ ಚೋಕ್ಸಿ

   

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯ ಬಂಧನ ಮೋದಿ ಸರ್ಕಾರದ ರಾಜತಾಂತ್ರಿಕತೆಯ ಗೆಲುವು ಎಂದು ಕಾನೂನು ಸಚಿವ ಅರ್ಜುನ್ ರಾಮ್‌ ಮೇಘವಾಲ್‌ ತಿಳಿಸಿದ್ದಾರೆ.

‘ಭಾರತ ಹೆಮ್ಮೆ ಪಡುವ ವಿಚಾರವಿದು, ಸರ್ಕಾರದ ರಾಜತಾಂತ್ರಿಕ ಮಾತುಕತೆಯ ಯಶಸ್ಸಿನಿಂದಾಗಿ ಚೋಕ್ಸಿಯ ಬಂಧನ ಸಾಧ್ಯವಾಯಿತು’ ಎಂದು ಸಚಿವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಪೊಲೀಸರು ಬಂಧಿಸಿದ್ದಾರೆ .

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ ₹13,850 ಕೋಟಿ ಸಾಲ ಪಡೆದಿದ್ದ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ, ಸಾಲ ಮರುಪಾವತಿಸದೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಇವರಿಬ್ಬರಿಗಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹುಡುಕಾಟ ನಡೆಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.