ADVERTISEMENT

ಐಸಿಎಸ್‌ಇ 12ನೇ ತರಗತಿ ಫಲಿತಾಂಶ: 18 ವಿದ್ಯಾರ್ಥಿಗಳಿಗೆ ಮೊದಲ ರ್‍ಯಾಂಕ್‌

ಪಿಟಿಐ
Published 24 ಜುಲೈ 2022, 13:38 IST
Last Updated 24 ಜುಲೈ 2022, 13:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಐಸಿಎಸ್‌ಇ 12ನೇ ತರಗತಿಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಶೇ 99.52ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ 99.75ರಷ್ಟು ಅಂಕ ಪಡೆದ 18 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.

ಶೇ99.50ರಷ್ಟು ಅಂಕ ಗಳಿಸಿರುವ 58 ವಿದ್ಯಾರ್ಥಿಗಳು ದ್ವಿತೀಯ ರ‍್ಯಾಂಕ್‌ ಹಾಗೂ ಶೇ 99.25ರಷ್ಟು ಅಂಕ ಪಡೆದಿರುವ 78 ವಿದ್ಯಾರ್ಥಿಗಳು ತೃತೀಯ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.

ADVERTISEMENT

ಹುಡುಗಿಯರು ಕಡಿಮೆ ಅಂತರದಲ್ಲಿ ಹುಡುಗರಿಗಿಂತ ಮೇಲುಗೈ ಸಾಧಿಸಿದ್ದಾರೆ ಎಂದು ಮಂಡಳಿಯ ಮುಖ್ಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ. ಮಂಡಳಿಯು ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.