ADVERTISEMENT

ಜನಪ್ರತಿನಿಧಿಗಳ ಜೊತೆ ಸಚಿವ ಶಾ ಚರ್ಚೆ

ಪೌರತ್ವ ತಿದ್ದುಪಡಿ ಮಸೂದೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 17:26 IST
Last Updated 30 ನವೆಂಬರ್ 2019, 17:26 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಗೃಹಸಚಿವ ಅಮಿತ್ ಶಾ ಅವರು ಶನಿವಾರ ಈಶಾನ್ಯ ರಾಜ್ಯಗಳ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದರು. ಆ ಮೂಲಕ ಪ್ರಸಕ್ತ ಅಧಿವೇಶನದಲ್ಲೇ ಕೇಂದ್ರವು ಈ ಮಸೂದೆ ಮಂಡಿಸಬಹುದೆಂಬ ಸೂಚನೆ ಲಭಿಸಿದೆ.

ಅಸ್ಸಾಂ, ಅರುಣಾಚಲಪ್ರದೇಶ ಹಾಗೂ ಮೇಘಾಲಯದ ವಿವಿಧ ರಾಜಕೀಯ ಪಕ್ಷಗಳ ನಾಯಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಶಾ ಸಭೆ ನಡೆಸಿದರು. ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನವಾಲ್‌, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್‌ ಸಂಗ್ಮಾ, ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಹಾಗೂ ಕೆಲವು ಸಂಸದರು ಸಭೆಯಲ್ಲಿ ಪಾಲ್ಗೊಂಡು ಮಸೂದೆಯನ್ನು ಕುರಿತ ತಮ್ಮ ಆತಂಕಗಳನ್ನು ಹೇಳಿಕೊಂಡರು.

ಈ ಮಸೂದೆಯು ಈಶಾನ್ಯ ರಾಜ್ಯಗಳ ವಿಶೇಷವಾಗಿ ಬುಡಕಟ್ಟು ಜನರ ಮೆಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂಬ ಆತಂಕವನ್ನು ಸಭೆಯಲ್ಲಿದ್ದ ಬಹುತೇಕ ಎಲ್ಲರೂ ವ್ಯಕ್ತಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.