ADVERTISEMENT

ಕಾಶ್ಮೀರದಲ್ಲಿ ಹಿಮಪಾತ: 30 ನಾಗರಿಕರ ರಕ್ಷಿಸಿದ ಸೇನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:47 IST
Last Updated 18 ಜನವರಿ 2022, 17:47 IST
ತಂಘ್ದಾರ್‌–ಚೌಕಿಬಲ್‌ ಹೆದ್ದಾರಿಯಲ್ಲಿ ಮಂಗಳವಾರ ಹಿಮಪಾತದಲ್ಲಿ ಸಿಲುಕಿದ್ದ ನಾಗರಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ಪಡೆ ಸಿಬ್ಬಂದಿ
ತಂಘ್ದಾರ್‌–ಚೌಕಿಬಲ್‌ ಹೆದ್ದಾರಿಯಲ್ಲಿ ಮಂಗಳವಾರ ಹಿಮಪಾತದಲ್ಲಿ ಸಿಲುಕಿದ್ದ ನಾಗರಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ಪಡೆ ಸಿಬ್ಬಂದಿ   

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಘ್ದಾರ್‌–ಚೌಕಿಬಲ್‌ ಹೆದ್ದಾರಿಯಲ್ಲಿ ಮಂಗಳವಾರ ಉಂಟಾದ ಅವಳಿ ಹಿಮಪಾತದಲ್ಲಿ ಮಗು ಸೇರಿ 30 ನಾಗರಿಕರು ಸಿಲುಕಿದ್ದು, ಎಲ್ಲರನ್ನೂ ಭಾರತೀಯ ಸೇನೆ ರಕ್ಷಿಸಿದೆ.

ತಂಘ್ದಾರ್‌–ಚೌಕಿಬಲ್‌ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಈ ಅವಘಡ ಸಂಭವಿಸಿದ್ದು, 14 ನಾಗರಿಕರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.

‘ಹೆದ್ದಾರಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧ ಪ್ರಯಾಣಕರಿರುವ ವಾಹನಗಳು ಹಿಮಕುಸಿತದಡಿ ಸಿಲುಕಿರುವ ಮಾಹಿತಿ ಪಡೆದು ತಕ್ಷಣವೇ ಕಾರ್ಯಪ್ರವೃತ್ತರಾದ ಕ್ಯಾಪ್ಟನ್‌ ಕುಲ್ಜೋತ್‌ ಸಿಂಗ್‌ ನೇತೃತ್ವದ ರಕ್ಷಣಾ ತಂಡವು, 30 ಮಂದಿಯನ್ನು ರಕ್ಷಿಸಿದೆ. ಹಿಮಕುಸಿತದಡಿ ಸಿಲುಕಿದ್ದ ಹೃದ್ರೋಗಿಯೊಬ್ಬರು ಅಸ್ವಸ್ಥಗೊಂಡಿದ್ದರು’ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಿಲುಕಿದ್ದ ನಾಗರಿಕರೆಲ್ಲರನ್ನೂ ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಬಿಸಿಯೂಟವನ್ನು ನೀಡಿ, ನಂತರ ಅವರೆಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಹಿಮಪಾತದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರವನ್ನು ಬಂದ್‌ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.