ADVERTISEMENT

6 ನದಿಪಾತ್ರಗಳ ಸ್ವಚ್ಛತೆ: 12 ಸಂಸ್ಥೆಗಳಿಂದ ಅಧ್ಯಯನ

ಪಿಟಿಐ
Published 28 ಫೆಬ್ರುವರಿ 2024, 16:00 IST
Last Updated 28 ಫೆಬ್ರುವರಿ 2024, 16:00 IST
-
-   

ನವದೆಹಲಿ: ಕರ್ನಾಟಕದಲ್ಲಿ ಹರಿಯುವ ಕೃಷ್ಣಾ, ಕಾವೇರಿ ಸೇರಿದಂತೆ ದೇಶದ ಪ್ರಮುಖ 6 ನದಿಪಾತ್ರಗಳ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಕುರಿತು ಅಧ್ಯಯನ ನಡೆಸಿ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕಾಗಿ ದೇಶದ 12 ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಶೆಖಾವತ್‌ ಬುಧವಾರ ಹೇಳಿದ್ದಾರೆ.

ಈ ಸಂಬಂಧ, ಜಲ ಶಕ್ತಿ ಸಚಿವಾಲಯದ ರಾಷ್ಟ್ರೀಯ ನದಿ ಸಂರಕ್ಷಣಾ ನಿರ್ದೆಶನಾಲಯ(ಎನ್‌ಆರ್‌ಸಿಡಿ) ಹಾಗೂ 12 ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ADVERTISEMENT

ನರ್ಮದಾ, ಗೋದಾವರಿ, ಪೆರಿಯಾರ್‌ ಹಾಗೂ ಮಹಾನದಿ ಈ ಯೋಜನೆಯಲ್ಲಿರುವ ಇತರ ನದಿಗಳಾಗಿವೆ. 

ಕಾವೇರಿ ನದಿಪಾತ್ರ ನಿರ್ವಹಣಾ ಯೋಜನೆ ಕುರಿತ ಅಧ್ಯಯನವನ್ನು ಬೆಂಗಳೂರಿನ ಐಐಎಸ್‌ಸಿ ಹಾಗೂ ತಿರುಚ್ಚಿಯ ಎನ್‌ಐಟಿ ನಡೆಸಲಿವೆ. ಮಹಾನದಿಗೆ ಸಂಬಂಧಿಸಿದ ಯೋಜನೆ ಅಧ್ಯಯನವನ್ನು ಐಐಟಿ–ರಾಯಪುರ ಹಾಗೂ ಐಐಟಿ–ರೂರ್ಕೆಲಾ ನಡೆಸಲಿದ್ದರೆ, ನರ್ಮದಾ– ಐಐಟಿ ಇಂದೋರ್‌ ಹಾಗೂ ಐಐಟಿ ಗಾಂಧಿನಗರ, ಗೋದಾವರಿ– ಐಐಟಿ ಹೈದರಾಬಾದ್ ಹಾಗೂ ನಾಗ್ಪುರ ಎನ್‌ಇಇಆರ್‌ಇ, ಪೆರಿಯಾರ್‌ ನದಿಪಾತ್ರ ನಿರ್ವಹಣೆ ಕುರಿತ ಯೋಜನೆಯ ಅಧ್ಯಯನವನ್ನು ಐಐಟಿ ಪಾಲಕ್ಕಾಡ್‌ ಹಾಗೂ ಎನ್‌ಐಟಿ ಕಲ್ಲಿಕೋಟೆ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.