ADVERTISEMENT

ಉತ್ತರಾಖಂಡ ಮೇಘಸ್ಫೋಟ: ಕೆಸರಿನಲ್ಲಿ ಹೂತು ಹೋದ ಪ್ರಾಚೀನ ಶಿವ ದೇವಾಲಯ

ಪಿಟಿಐ
Published 6 ಆಗಸ್ಟ್ 2025, 2:23 IST
Last Updated 6 ಆಗಸ್ಟ್ 2025, 2:23 IST
<div class="paragraphs"><p>ಕಲ್ಪ ಕೇದಾರ ದೇವಾಲಯ</p></div>

ಕಲ್ಪ ಕೇದಾರ ದೇವಾಲಯ

   

ಚಿತ್ರ ಕೃಪೆ: ಎಕ್ಸ್‌

ಉತ್ತರಕಾಶಿ: ಮೇಘಸ್ಫೋಟದಿಂದ ಖೀರಗಂಗಾ ನದಿಯಲ್ಲಿ ಮಂಗಳವಾರ ಉಂಟಾದ ಹಠಾತ್‌ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಕೆಸರಿನಡಿಯಲ್ಲಿ ಇಲ್ಲಿನ ಪ್ರಾಚೀನ ಕಲ್ಪ ಕೇದಾರ ದೇವಾಲಯವು ಹೂತು ಹೋಗಿದೆ.

ADVERTISEMENT

ಹಲವಾರು ವರ್ಷಗಳಿಂದ ನೆಲದಡಿಯಲ್ಲಿ ಹೂತು ಹೋಗಿದ್ದ ಈ ದೇವಾಲಯವು 1945ರಲ್ಲಿ ನಡೆದ ಉತ್ಖನನದಲ್ಲಿ ಪತ್ತೆಯಾಗಿತ್ತು. ಹಲವಾರು ಅಡಿ ನೆಲ ಅಗೆದ ನಂತರ ಕೇದರನಾಥ ದೇವಾಲಯವನ್ನೇ ಹೋಲುವ ಪ್ರಾಚೀನ ದೇವಾಲಯವು ಪತ್ತೆಯಾಗಿತ್ತು.

ನೆಲಮಟ್ಟಕ್ಕಿಂತ ಕೆಳಗಿರುವ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಕೆಳಗೆ ಇಳಿದು ಹೋಗಬೇಕಾಗಿತ್ತು. ಖೀರಗಂಗಾದಿಂದ ಸ್ವಲ್ಪ ನೀರು ಆಗಾಗ್ಗೆ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಶಿವಲಿಂಗದ ಮೇಲೆ ಹರಿಯುತ್ತಿತ್ತು. ದೇವಾಲಯದ ಹೊರಗೆ ಕಲ್ಲಿನ ಕೆತ್ತನೆಗಳಿವೆ.

ಕತುರೆ ಶೈಲಿಯಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮದ ವಾಸ್ತುಶಿಲ್ಪವನ್ನು ಹೋಲುತ್ತದೆ.

ಏತನ್ಮಧ್ಯೆ, ಪ್ರವಾಹದಿಂದ ಇದುವರೆಗೆ ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ತಿಳಿಸಿವೆ.

20–25 ಹೋಟೆಲ್‌ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. ಇಂಡೊ–ಟಿಬೆಟ್‌ ಗಡಿ ಪೊಲೀಸ್‌ನ (ಐಟಿಬಿಪಿ) ಪಡೆಯ 16 ಸದಸ್ಯರಿರುವ ತಂಡ ಧಾರಾಲಿಗೆ ತೆರಳಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.