ADVERTISEMENT

ಅಹಮದಾಬಾದ್ | ಕಳ್ಳಸಾಗಣೆಯ ₹1,800 ಕೋಟಿ ಮೌಲ್ಯದ ಮಾದಕ ವಸ್ತು ವಶ

ಪಿಟಿಐ
Published 14 ಏಪ್ರಿಲ್ 2025, 5:44 IST
Last Updated 14 ಏಪ್ರಿಲ್ 2025, 5:44 IST
<div class="paragraphs"><p>ಮಾದಕ ವಸ್ತು– ಸಂಗ್ರಹ ಚಿತ್ರ,</p></div>

ಮಾದಕ ವಸ್ತು– ಸಂಗ್ರಹ ಚಿತ್ರ,

   

ಅಹಮದಾಬಾದ್: ಕಳ್ಳಸಾಗಣೆ ಮಾಡುತ್ತಿದ್ದ ₹1,800 ಕೋಟಿ ಮೌಲ್ಯದ 300 ಕೆ.ಜಿ ಮಾದಕ ವಸ್ತುವನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌ 12 ಮತ್ತು 13ರ ಮಧ್ಯರಾತ್ರಿ ಗುಜರಾತ್‌ನ ಭಾರತೀಯ ಸಮುದ್ರ ಗಡಿ ರೇಖೆ ಬಳಿ ಕರಾವಳಿ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿತು. ರಕ್ಷಣಾ ಪಡೆಯ ಹಡಗು ಹತ್ತಿರ ಸಮೀಪಿಸುತ್ತಿರುವುದನ್ನು ನೋಡಿ, ಹಡಗಿನಲ್ಲಿದ್ದ ಕಳ್ಳಸಾಗಣೆದಾರರು ಅಕ್ರಮವಾಗಿ ಸಾಗಿಸುತ್ತಿದ್ದ ಮಾದಕ ವಸ್ತುವನ್ನು ಸಮುದ್ರಕ್ಕೆ ಎಸೆದು ಪರಾರಿಯಾದರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

₹1,800 ಕೋಟಿ ಮೌಲ್ಯದ 300 ಕೆ.ಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾದಕ ವಸ್ತುವನ್ನು ಮೆಥಾಂಫೆಟಮೈನ್ ಎಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಎಟಿಎಸ್‌ಗೆ ಹಸ್ತಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.