ADVERTISEMENT

ಜಮ್ಮು | ₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಪಂಜಾಬ್‌ನ ಇಬ್ಬರ ಬಂಧನ

ಪಿಟಿಐ
Published 1 ಅಕ್ಟೋಬರ್ 2023, 14:44 IST
Last Updated 1 ಅಕ್ಟೋಬರ್ 2023, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬನಿಹಾಲ್/ ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಮಬನ್ ಜಿಲ್ಲೆಯಲ್ಲಿ ವಾಹನದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 30 ಕೆ.ಜಿಯಷ್ಟು ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾನುವಾರ ತಿಳಿಸಿದ್ದಾರೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ₹300 ಕೋಟಿ ಆಗಿದೆ. ಮಾದಕ ದ್ರವ್ಯ ನಂಟಿರುವ ಭಯೋತ್ಪಾದನಾ ಚಟುವಟಿಕೆ ಪ್ರಕರಣವನ್ನು ಭೇದಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವರ್ಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಅತಿಹೆಚ್ಚು ಪ್ರಮಾಣದ ಮಾದಕ ದ್ರವ್ಯ ಪ್ರಕರಣಗಳಲ್ಲಿ ಇದು ಒಂದಾಗಿದೆ. ಮೊದಲಿಗೆ ಬಂಧಿತರಿಂದ ವಶಕ್ಕೆ ಪಡೆದ ವಸ್ತುವನ್ನು ಹೆರಾಯಿನ್ ಎಂದು ಭಾವಿಸಲಾಗಿತ್ತು. ಆದರೆ, ತನಿಖೆ ಬಳಿಕ ಇದು ಕೊಕೇನ್ ಎಂದು ದೃಢಪಟ್ಟಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಕೇಶ್ ಸಿಂಗ್ ಹೇಳಿದ್ದಾರೆ.

ADVERTISEMENT

ಗುವಾಹಟಿ ವರದಿ

ಅಂತರರಾಜ್ಯ ಮಾದಕ ದ್ರವ್ಯ ಜಾಲವನ್ನು ಭೇದಿಸಿರುವ ಅಸ್ಸಾಂ ಪೊಲೀಸರು, ₹2 ಕೋಟಿ ಮೌಲ್ಯದ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ. ಜತೆಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮಣಿಪುರದ ನಾಲ್ವರು ಸೇರಿದಂತೆ ಐವರನ್ನು ಭಾನುವಾರ ಬಂಧಿಸಿದ್ದಾರೆ. 

ಮಣಿಪುರದಿಂದ ಬರುತ್ತಿದ್ದ ವಾಹನವನ್ನು ಕಾಮರೂಪ್ ಜಿಲ್ಲೆಯ ಅಮಿಂಗಾಂವ್ ಬಳಿ ತಡೆದು ಪರಿಶೀಲಿಸಲಾಗಿದ್ದು, ₹2 ಕೋಟಿ ಮೌಲ್ಯದ 250 ಗ್ರಾಂ. ನಷ್ಟು ಹೆರಾಯಿನ್ ಪತ್ತೆಯಾಗಿದೆ. ಬಂಧಿತರಲ್ಲಿ ಇಬ್ಬರು ಮಹಿಳೆಯರಿದ್ದಾರೆ ಎಂದು ಅಸ್ಸಾಂ ಪೊಲೀಸ್ ವಕ್ತಾರ ಪ್ರಣವ್ ಜ್ಯೋತಿ ಗೋಸ್ವಾಮಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.