ADVERTISEMENT

ದೇಶದಲ್ಲಿ ಮೊದಲ ಬಾರಿ ಶ್ವಾನಕ್ಕೆ ‘ಪೇಸ್‌ಮೇಕರ್‌’ ಅಳವಡಿಕೆ

ಪಿಟಿಐ
Published 9 ಫೆಬ್ರುವರಿ 2020, 16:47 IST
Last Updated 9 ಫೆಬ್ರುವರಿ 2020, 16:47 IST
ಶಸ್ತ್ರಚಿಕಿತ್ಸೆಗೆ ಒಳಗಾದ ಖುಷಿ 
ಶಸ್ತ್ರಚಿಕಿತ್ಸೆಗೆ ಒಳಗಾದ ಖುಷಿ    

ನವದೆಹಲಿ: ದೇಶದ ಪಶುವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಏಳೂವರೆ ವರ್ಷದ ಕಾಕರ್‌ ಸ್ಪೇನಿಯಲ್ ಜಾತಿಯ ಶ್ವಾನಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ‘ಪೇಸ್‌ಮೇಕರ್‌’ (ಹೃದಯ ಬಡಿತ ನಿಯಂತ್ರಿಸುವ ಉಪಕರಣ) ಉಪಕರಣ ಅಳವಡಿಸಲಾಗಿದೆ.

‘ಈ ಜಾತಿಯ ಶ್ವಾನದ ಹೃದಯ ಬಡಿತ ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ 60–120 ಇರುತ್ತದೆ. ಖುಷಿ ಹೆಸರಿನ ಹೆಣ್ಣು ಶ್ವಾನದಹೃದಯ ಬಡಿತ ಪ್ರತಿ ನಿಮಿಷಕ್ಕೆ 20ಕ್ಕೆ ಇಳಿಕೆಯಾಗಿತ್ತು. ಈ ಕಾರಣ ಹೃದಯದಿಂದ ಸೂಕ್ತವಾಗಿ ರಕ್ತ ಸರಬರಾಜು ಆಗುತ್ತಿರಲಿಲ್ಲ.ಇದರ ಪರಿಣಾಮವಾಗಿ ಖುಷಿ ಅನಾರೋಗ್ಯಕ್ಕೆ ಒಳಗಾಗಿತ್ತು. ಇದೀಗ ಆಮದು ಮಾಡಿಕೊಂಡ ಪೀಡಿಯಾಟ್ರಿಕ್‌ ಪೇಸ್‌ಮೇಕರ್‌ ಅನ್ನು ಅಳವಡಿಸಲಾಗಿದೆ’ ಎಂದು ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿರುವ ಮ್ಯಾಕ್ಸ್‌ ವೆಟ್ಸ್‌ ಖಾಸಗಿ ಆಸ್ಪತ್ರೆಯ ಪಶುವೈದ್ಯ ಭಾನು ದೇವ್‌ ಶರ್ಮಾ ಹೇಳಿದರು.

‘ಇಸಿಜಿ ಮುಖಾಂತರ ಹೃದಯದಲ್ಲಿ ರಕ್ತ ಸರಬರಾಜಿಗೆ ಅಡ್ಡಿ ಇರುವುದು ಪತ್ತೆಯಾಗಿತ್ತು. ಈ ಕುರಿತು ಯುರೋಪ್‌ನಲ್ಲಿರುವ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಯಿತು. ದೇಶದಲ್ಲಿ ಇದೇ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಶ್ವಾನವೊಂದಕ್ಕೆ ಪೇಸ್‌ಮೇಕರ್‌ ಅಳವಡಿಸಲಾಗಿದೆ’ ಎಂದರು.

ADVERTISEMENT

‘ಶಸ್ತ್ರಚಿಕಿತ್ಸೆಗೂ ಮೊದಲು ಯಾವಾಗಲೂ ನಿಶ್ಯಕ್ತವಾಗಿದ್ದ ಖುಷಿ ಇದೀಗ ಲವಲವಿಕೆಯಿಂದಿದೆ’ ಎಂದು ಶ್ವಾನದ ಮಾಲೀಕ ಗುರುಗಾಂವ್‌ನ ಮನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.