ADVERTISEMENT

ಚಳಿಗೆ ಉತ್ತರ ಭಾರತ ಗಡಗಡ: ಜನಜೀವನ ಅಸ್ತವ್ಯಸ್ತ

ಕಣಿವೆಯಲ್ಲಿ ಮೈನಸ್‌ಗೆ ತಗ್ಗಿದ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 19:33 IST
Last Updated 28 ಡಿಸೆಂಬರ್ 2019, 19:33 IST
ದೆಹಲಿಯ ರಾಜಪಥ್‌ ರಸ್ತೆಯಲ್ಲಿ ಕೊರೆಯುವ ಚಳಿಯ ನಡುವೆಯೇ ವಿದ್ಯಾರ್ಥಿಗಳು ಶಾಲೆಗೆ ತೆರಳಿದರು
ದೆಹಲಿಯ ರಾಜಪಥ್‌ ರಸ್ತೆಯಲ್ಲಿ ಕೊರೆಯುವ ಚಳಿಯ ನಡುವೆಯೇ ವಿದ್ಯಾರ್ಥಿಗಳು ಶಾಲೆಗೆ ತೆರಳಿದರು   

ಡಿಸೆಂಬರ್‌ ತಿಂಗಳ ಚಳಿಯ ಹೊಡೆತಕ್ಕೆ ಬಹುತೇಕ ಉತ್ತರ ಭಾರತ ನಡುಗುತ್ತಿದೆ. ದೆಹಲಿಯಲ್ಲಿ ತಾಪಮಾನ ತೀರಾ ಕನಿಷ್ಠಕ್ಕೆ ಕುಸಿದಿದೆ. ವಾಹನ, ರೈಲು, ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ದೈನಂದಿನ ಜನಜೀವನಕ್ಕೆ ತೊಡಕಾಗಿದೆ. ಉತ್ತರದ ರಾಜ್ಯಗಳಲ್ಲಿ ತೀವ್ರ ಚಳಿಯ ವಾತಾವರಣ ಇನ್ನೂ ಕೆಲವು ದಿನ ಮುಂದುವರಿಯಲಿದೆ

ದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಈ‍//ರುತುವಿನ// ಅತ್ಯಂತ ಹೆಚ್ಚು ತಂಪುಹವೆ ಕಂಡುಬಂದಿತು. 2.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಕುಸಿದಿದೆ.ದಟ್ಟವಾದ ಮಂಜಿನ ಮೋಡಗಳು ಆವರಿಸಿದ್ದು, ಎದುರಿನ ವಸ್ತುಗಳನ್ನು ನೋಡಲೂ ಕಷ್ಟವಾಗಿದೆ. ವಾಹನ ಸಂಚಾರ, ರೈಲು ಮತ್ತು ವಾಯು ಸಂಚಾರಕ್ಕೆ ಅಡಚಣೆ ಉಂಟಾಗಿದೆ

*ದೆಹಲಿ: 1901ರ ನಂತರದ ಎರಡನೇ ಅತಿ ಕನಿಷ್ಠ ಉಷ್ಣಾಂಶದ ಡಿಸೆಂಬರ್ ತಿಂಗಳೆನಿಸಿದೆ

ADVERTISEMENT

*ವಿಮಾನ ನಿಲ್ದಾಣವುCAT III B ಸ್ಥಿತಿಯಲ್ಲಿದೆ. ಅಂದರೆ, ರನ್‌ವೇನಲ್ಲಿ ಗೋಚರತೆ ವ್ಯಾಪ್ತಿ (ಆರ್‌ವಿಆರ್‌) 50 ಮೀಟರ್‌ನಿಂದ 175 ಮೀಟರ್‌ ನಡುವೆ ಇದೆ

*ಮಂದ ಗೋಚರತೆಯ ಕಾರಣ 2–5 ಗಂಟೆಯ ಅವಧಿಯಲ್ಲಿ 24 ರೈಲುಗಳ ಸಂಚಾರ ವಿಳಂಬವಾಗಿದೆ. ಹೌರಾ–ನವದೆಹಲಿ ಎಕ್ಸ್‌ಪ್ರೆಸ್ ರೈಲು 5 ಗಂಟೆ ತಡವಾಗಿ ಚಲಿಸಿತು

*ಚಳಿಗಾಳಿ ಮತ್ತು ತೀವ್ರ ಚಳಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‌(ಉಷ್ಣಾಂಶ ಡಿಗ್ರಿ ಸೆಲ್ಸಿಯಸ್‌ಗಳಲ್ಲಿ)


ದೆಹಲಿ
ಲೋಧಿ ರಸ್ತೆ 1.7
ಸಫ್ದಾರ್‌ಜಂಗ್ 2.4
ಪಾಲಂ 3.1

ಸಫ್ದರ್‌ಜಂಗ್‌ನಲ್ಲಿ ದಾಖಲೆ ತಾಪಮಾನ ಕುಸಿತ

ಡಿ.17, 1930: 0

ಡಿ.11, 1996: 2.3

ಡಿ.30, 2013: 2.4

ಜಮ್ಮು–ಕಾಶ್ಮೀರ

ಶ್ರೀನಗರ:–5.6

ಗುಲ್ಮಾರ್ಗ್‌ ಸ್ಕೀ ರೆಸ್ಟಾರ್ಟ್: –9.5

ಪಹಲ್ಗಾಮ್: –12

ಲೇಹ್‌:–20.7

ಕು‍ಪ್ವಾರ: –6.3

ಖಾಜಿಗುಂಡ್: –10.5

ಕೊಕೆರ್‌ನಾಗ್: –7

*ಅಮರನಾಥ ಯಾತ್ರೆಯ ಬೇಸ್‌ಕ್ಯಾಂಪ್‌ ಪಹಲ್ಗಾಮ್‌ನಲ್ಲಿ ಕಣಿವೆಯ ಅತ್ಯಂತ ಕಡಿಮೆ ತಾಪಮಾನ ಕಂಡುಬಂದಿದೆ

*ಗುಲ್ಮಾರ್ಗ್‌ ಹಾಗೂ ಪಹಲ್ಗಾಮ್‌ನಲ್ಲಿ ಎರಡು ದಿನಗಳ ಹಿಂದೆ ಇನ್ನೂ ಕಡಿಮೆ ಉಷ್ಣಾಂಶ ದಾಖಲಾಗಿತ್ತು

*ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶ ಲೇಹ್‌ ಪಟ್ಟಣದಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ

ಕಣಿವೆಯಲ್ಲಿ ‘ಚಿಲ್ಲೆ ಕಲಾಂ’ ಹವಾ
ಕಾಶ್ಮೀರ ಕಣಿವೆ ಹಾಗೂ ಲೇಹ್‌ ವಲಯದಲ್ಲಿ 40 ದಿನಗಳ‘ಚಿಲ್ಲೆ ಕಲಾಂ’ //ರುತು// ಶುರುವಾಗಿದೆ. 40 ದಿನಗಳ ಈ ಅವಧಿಯು ಪ್ರತಿವರ್ಷ ಡಿ.21ರಂದು ಆರಂಭವಾಗಿ ಜನವರಿ 31ರವರೆಗೆ ಇರಲಿದೆ. ಈ ಅವಧಿಯಲ್ಲಿ ಇಡೀ ಕಣಿವೆಯು ಚಳಿಯಿಂದ ಅಕ್ಷರಶಃ ನಲುಗುತ್ತದೆ. ಇದಾದ ನಂತರವೂ ಮುಂದುವರಿಯುವ ಚಳಿಯನ್ನು ಎರಡು ರೀತಿ ವಿಂಗಡಿಸಲಾಗಿದೆ. ಚಿಲ್ಲೆ ಕಲಾಂ ನಂತರದ 20 ದಿನಗಳ ಅವಧಿಯನ್ನು ‘ಚಿಲ್ಲೆ ಖುರ್ದ್’ (ಸಣ್ಣ ಚಳಿ) ಮತ್ತು 10 ದಿನಗಳ ಅವಧಿಯನ್ನು ‘ಚಿಲ್ಲೆ ಬಚ್ಚಾ’ (ಪುಟಾಣಿ ಚಳಿ) ಎಂದು ಕರೆಯಲಾಗುತ್ತದೆ.

ಹಿಮಾಚಲ ಪ್ರದೇಶ
ಕೆಲಾಂಗ್ –15
ಕಲ್ಪಾ: –1.7
ಮನಾಲಿ: –2.2
ಶಿಮ್ಲಾ: 3.8


*ಹಿಮಾಚಲ ಪ್ರದೇಶದ ಕೆಲಾಂಗ್‌ನಲ್ಲಿ ರಾಜ್ಯದ ಅತಿಕಡಿಮೆ ಉಷ್ಣಾಂಶ ದಾಖಲು

*ಡಿ.31ರಿಂದ ಜನವರಿ 2ರ ಅವಧಿಯಲ್ಲಿ ಎತ್ತರದ ಬೆಟ್ಟಗಳಲ್ಲಿ ಹಿಮಪಾತ ಸಂಭವ

*ಸೊಲನ್‌ನಲ್ಲಿ ಗರಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ದಾಖಲು

ಹರಿಯಾಣ‌
ಹಿಸಾರ್: 0.2
ಸಿರ್ಸ: 2
ರೊಹ್ಟಕ್: 1.8

ಪಂಜಾಬ್
ಭಟಿಂಡಾ: 2.8
ಅಮೃತಸರ: 5
ಲುಧಿಯಾನ: 5.6
ಗುರುದಾಸ್‌ಪುರ: 5.8
ಚಂಡೀಗಡ: 6.6

*ಎರಡು ರಾಜ್ಯಗಳಿಗೆ ರಾಜಧಾನಿಯಾಗಿರುವ ಚಂಡೀಗಡದಲ್ಲಿ ಗರಿಷ್ಠ ತಾಪಮಾನ 8.8 ಡಿಗ್ರಿ ಸೆಲ್ಸಿಯಸ್ ದಾಖಲು

ರಾಜಸ್ಥಾನ
ಫತೇಪುರ: –4
ಸಿಕರ್: –1
ಮೌಂಟ್ ಅಬು: –1.5

ತೀವ್ರಗೊಳ್ಳಲಿದೆ ಚಳಿ:ಪಂಜಾಬ್, ಹರಿಯಾಣ, ಚಂಡೀಗಡ, ದೆಹಲಿ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ‘ಚಳಿ‘ ಸ್ಥಿತಿಯು ‘ತೀವ್ರ ಚಳಿ’ ಸ್ಥಿತಿಗೆ ಬದಲಾಗಬಹುದು ಎಂದು ಹವಾಮಾ ಇಲಾಖೆ ಸೂಚನೆನೀಡಿದೆ. ಡಿಸೆಂಬರ್ 31ರ ಬಳಿಕ ಚಳಿ ತಗ್ಗುವ ಸಾಧ್ಯತೆಯಿದೆ. ದೇಶದ ವಾಯವ್ಯ ಭಾಗ ಹಾಗೂ ಕೇಂದ್ರ ಭಾಗದಲ್ಲಿ ಡಿ.31ರಿಂದ ಜನವರಿ 1ರ ನಡುವೆ ಮಳೆಯಾಗುವ ಸಾಧ್ಯತೆಯಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.