ADVERTISEMENT

ವಿಪಕ್ಷಗಳ ಒಗ್ಗಟ್ಟಿಗೆ ಕಾಂಗ್ರೆಸ್‌ ನಿಜವಾದ ಆಧಾರ: ಶಶಿ ತರೂರ್

ಪಿಟಿಐ
Published 2 ಏಪ್ರಿಲ್ 2023, 14:26 IST
Last Updated 2 ಏಪ್ರಿಲ್ 2023, 14:26 IST
ಶಶಿ ತರೂರ್ 
ಶಶಿ ತರೂರ್    

ನವದೆಹಲಿ: ದೇಶದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಮೂಡುತ್ತಿರುವುದು ಸ್ವಾಗತಾರ್ಹ. ಕಾಂಗ್ರೆಸ್‌ ಪಕ್ಷವೇ ನಿಜವಾದ ಆಧಾರದಂತೆ ಕಾರ್ಯನಿರ್ವಹಿಸಲಿದ್ದು, ಉಳಿದ ಪಕ್ಷಗಳು ಅದರೊಂದಿಗೆ ಸೇರಿಕೊಳ್ಳುತ್ತವೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಭಾನುವಾರ ಹೇಳಿದ್ದಾರೆ.

‘ಒಂದು ವೇಳೆ ನಾನು ಪಕ್ಷದ ನಾಯಕತ್ವ ವಹಿಸಿದ್ದರೆ, ಮೈತ್ರಿಕೂಟದ ಸಂಚಾಲಕ ಜವಾಬ್ದಾರಿ ನಿರ್ವಹಿಸುವಂತೆ ಸಣ್ಣಪಕ್ಷವೊಂದಕ್ಕೆ ಅವಕಾಶ ನೀಡುತ್ತಿದ್ದೆ’ ಎಂದೂ ತರೂರ್‌ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಜೈಲು ಶಿಕ್ಷೆಯಾಗಿರುವುದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹೊಸ ದಿಕ್ಕು ತೋರಿದೆ. ಅನೇಕ ಪಕ್ಷಗಳು ಈಗ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿವೆ’ ಎಂದು ಹೇಳಿದ್ದಾರೆ.

‘ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ವಿರೋಧ ಪಕ್ಷಗಳಿಗೆ ಈಗ ಹೊಸ ಕಾರಣವೊಂದು ಸಿಕ್ಕಂತಾಗಿದೆ. ಹೀಗಾಗಿ, ಮುಂದಿನ ವರ್ಷ ನಡೆಯುವ ಚುನಾವಣೆ ಬಿಜೆಪಿ ಪಾಲಿಗೆ ಕಠಿಣವಾಗಲಿದೆ’ ಎಂದೂ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.