ADVERTISEMENT

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಪರ ಬೆಂಬಲ

ಮದುವೆ ಬಳಿಕ ಪ್ರಿಯಾಂಕಾ ಗಾಂಧಿ ಕುಟುಂಬದವರಲ್ಲ‌– ಸಂಸದ ಅಬ್ದುಲ್ ಖಲೀಕ್

ಪಿಟಿಐ
Published 28 ಸೆಪ್ಟೆಂಬರ್ 2022, 14:46 IST
Last Updated 28 ಸೆಪ್ಟೆಂಬರ್ 2022, 14:46 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್‌ ಸಂಸದ ಅಬ್ದುಲ್ ಖಲೀಕ್ ಅವರು ಬುಧವಾರ ಹೇಳಿದ್ದು, ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಬಳಿಕ ಪ್ರಿಯಾಂಕಾ ಅವರು, ವಾದ್ರಾ ಕುಟುಂಬದ ಸೊಸೆಯಾಗಿದ್ದಾರೆ. ಅವರೀಗ ಗಾಂಧಿ ಕುಟುಂಬದ ಸದಸ್ಯರಲ್ಲ ಎಂದೂ ಕಾರಣ ನೀಡಿದ್ದಾರೆ.

‘ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಹಾಗಾಗಿ, ಆ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರು ಸೂಕ್ತ ಅಭ್ಯರ್ಥಿ ಎಂದು ನಾನು ಪರಿಗಣಿಸುತ್ತೇನೆ’ ಎಂದು ಅಸ್ಸಾಂನ ಬಾರ್ಪೇಟಾ ಸಂಸದ ಅಬ್ದುಲ್ ಖಲೀಕ್ ಟ್ವೀಟ್ ಮಾಡಿದ್ದಾರೆ.

‍‘ಪಕ್ಷದ ಕಾರ್ಯಕರ್ತರ ಆಶಯವನ್ನು ನಾನು ಗೌರವಿಸುತ್ತೇನೆ. ಆದರೆ, ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲ’ ಎಂದು ರಾಹುಲ್ ಗಾಂಧಿ ಅವರು ಅಶೋಕ್‌ ಗೆಹಲೋತ್ ಅವರಿಗೆ ಹೇಳಿದ ಕೆಲವೇ ದಿನಗಳ ಬಳಿಕ ಅಬ್ದುಲ್ ಅವರು ಪ್ರಿಯಾಂಕಾ ಅವರ ಹೆಸರನ್ನು ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.