ADVERTISEMENT

ಜನಗಣತಿ ವಿಳಂಬ: ಕೇಂದ್ರದ ನಡೆಗೆ ಕಾಂಗ್ರೆಸ್‌ ಟೀಕೆ

ಪಿಟಿಐ
Published 21 ಮಾರ್ಚ್ 2025, 14:15 IST
Last Updated 21 ಮಾರ್ಚ್ 2025, 14:15 IST
ಕಾಂಗ್ರೆಸ್‌ ಧ್ವಜ
ಕಾಂಗ್ರೆಸ್‌ ಧ್ವಜ   

ನವದೆಹಲಿ: ಜನಗಣತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಹಾಗೂ ಇದಕ್ಕಾಗಿ ನಿಗದಿಯಾಗಿರುವ ಅನುದಾನವನ್ನು ಬಳಸಿಲ್ಲ ಎಂದು ಕಾಂಗ್ರೆಸ್‌ಪಕ್ಷವು ಶುಕ್ರವಾರ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ನಡೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಪಕ್ಷದ ನಾಯಕ ಅಜಯ್‌ ಮಾಕನ್ ಅವರು, ‘2011ರಲ್ಲಿ ಜನಗಣತಿ ಆಗಿದ್ದು, ಜನಸಂಖ್ಯೆ 125 ಕೋಟಿ ಇತ್ತು. ಈಗ ಅಂದಾಜು 146 ಕೋಟಿ ಇರಬಹುದು. ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜನಗಣತಿ ಕಾರ್ಯ ಮುಖ್ಯವಾದುದು’ ಎಂದರು.

ರಾಷ್ಟ್ರೀಯ ಅಹಾರ ಭದ್ರತೆ ಕಾಯ್ದೆಯಡಿ ಸದ್ಯ ಗ್ರಾಮೀಣ ಭಾಗದ ಶೇ 70, ನಗರ ಪ್ರದೇಶದ ಶೇ 50ರಷ್ಟು ಜನರು ಸೌಲಭ್ಯ ಪಡೆಯುತ್ತಿದ್ದಾರೆ. ಗಣತಿ ಪ್ರಕ್ರಿಯೆ ನಡೆದರೆ ಹೆಚ್ಚುವರಿಯಾಗಿ 15 ಕೋಟಿ ಜನರಿಗೆ ಇದರ ಫಲ ಸಿಗಬಹುದು. ಆದಷ್ಟು ಶೀಘ್ರದಲ್ಲಿ ಗಣತಿ ಪ್ರಕ್ರಿಯೆಯನ್ನು ಶುರು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.