ADVERTISEMENT

ಎಂಎಸ್‌ಪಿಗೆ ಕಾನೂನು ಭರವಸೆ ನೀಡಿ: ಕಾಂಗ್ರೆಸ್‌

ಪಿಟಿಐ
Published 28 ಫೆಬ್ರುವರಿ 2025, 15:33 IST
Last Updated 28 ಫೆಬ್ರುವರಿ 2025, 15:33 IST
   

ನವದೆಹಲಿ: ಬಿಜೆಪಿಯು ದೇಶದ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ. 

ಈ ಕುರಿತು ಮಾತನಾಡಿದ ಕಾಂಗ್ರೆಸ್‌ ನಾಯಕ ಅಭಯ್‌ ದುಬೆ ‘ಸರ್ಕಾರವು ರೈತ ವಿರೋಧಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ನೀಡಲಾಗುತ್ತಿದ್ದ ಬೋನಸ್‌ ಅನ್ನು ಸ್ಥಗಿತಗೊಳಿಸಲಾಯಿತು. ಭೂಮಿಯ ಮೇಲಿನ ರೈತರ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಯಿತು ಹಾಗೂ ವೆಚ್ಚದ ಶೇ50ಕ್ಕಿಂತ ಅಧಿಕ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲು ನಿರಾಕರಿಸಲಾಯಿತು. ಕರಾಳ ಕೃಷಿ ಕಾನೂನು ಜಾರಿಗೆ ಮಾಡಲಾಯಿತು (ಇದೀಗ ಹಿಂಪಡೆಯಲಾಗಿದೆ)’ ಎಂದು ಆರೋಪಿಸಿದರು. 

ಅಲ್ಲದೇ ‘ಕೇಂದ್ರ ಸರ್ಕಾರವು ಸ್ವಾಮಿನಾಥನ್‌ ಆಯೋಗದ ಶಿಫಾರಸಿನಂತೆ ಎಮ್‌ಎಸ್‌ಪಿ ನಿಗದಿ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗೆ (ಎಮ್‌ಎಸ್‌ಪಿ) ಕಾನೂನಾತ್ಮಕ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.