ADVERTISEMENT

ಕಾಂಗ್ರೆಸ್, ಬಿಜೆಪಿ ಕೊಟ್ಟ ಭರವಸೆ ಈಡೇರಿಸದೇ ಜನತೆಗೆ ದ್ರೋಹ ಬಗೆದಿವೆ- ಮಾಯಾವತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 10:07 IST
Last Updated 27 ಮಾರ್ಚ್ 2019, 10:07 IST
ಬಿಎಸ್ಪಿ ನಾಯಕಿ ಮಾಯಾವತಿ
ಬಿಎಸ್ಪಿ ನಾಯಕಿ ಮಾಯಾವತಿ   

ಉತ್ತರ ಪ್ರದೇಶ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕೂಡ ಕಳೆದ ಬಾರಿಯ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ರೈತರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ದೇಶದ ಜನತೆಗೆ ದ್ರೋಹ ಮಾಡಿದೆ.ಕಾಂಗ್ರೆಸ್‌ ಬಡತನ ನಿರ್ಮೂಲನೆಗೆ ಜಾರಿಗೆ ತಂದಗರೀಭಿ ಹಠಾವೋ 2.0 ಸುಳ್ಳು ಎಂದು ಬಿಜೆಪಿ ಹೇಳುತ್ತಿದ್ದುದು ಸತ್ಯ. ಹೀಗಾಗಿ ಎರಡೂ ಪಕ್ಷಗಳು ಒಂದೇ ಎಂದಿದ್ದಾರೆ.

ಬಿಜೆಪಿ ಜಾರಿಗೆ ತಂದ ನೋಟುರದ್ದತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಜನರೂ ಸೇರಿದಂತೆ ಬಡವರ ಸ್ಥಿತಿ ಚಿಂತಾಜನಕವಾಗಿದೆ.ನೋಟುರದ್ಧತಿಯಿಂದ ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ. ಇದಕ್ಕೆ ಕಾರಣವಾದ ಬಿಜೆಪಿ ರಾಷ್ಟ್ರದ ಜನರಲ್ಲಿ ಕ್ಷಮೆ ಯಾಚಿಸುತ್ತದೆಯೇಎಂದು ಮಾಯಾವತಿ ಟ್ವೀಟ್ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ADVERTISEMENT

ಬಿಜೆಪಿ ಜಾರಿಗೆ ತಂದ ಈ ಅರೆಬೆಂದ ನೋಟುರದ್ದತಿ ಕ್ರಮದಿಂದಾಗಿ ಗ್ರಾಮೀಣ ಭಾಗದ ಜನರು ಬಲವಂತವಾಗಿ ನಗರಗಳಿಂದ ಹಳ್ಳಿಗಳಿಗೆ ತೆರಳುವಂತೆ ಮಾಡಿ ಹೊಟ್ಟೆಪಾಡಿಗಾಗಿ ಕೂಲಿಗಳಾಗಿ ದುಡಿಯುವಂತೆ ಮಾಡಿದೆ. ನೋಟುರದ್ದತಿಯಿಂದಾಗಿ ಬಂಡವಾಳದಾರರು ಹಾಗೂ ಶ್ರೀಮಂತರಿಗೆ ಯಾವುದೇ ತೊಂದರೆಯಾಗಿಲ್ಲ, ತೊಂದರೆಯಾಗಿರುವುದುದೇಶದ ಬೆನ್ನೆಲುಬಾದ ನಿಜವಾದ ಭಾರತೀಯರಾದಗ್ರಾಮೀಣ ಭಾಗದ ಜನರಿಗೆ ಮಾತ್ರ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪ್ರಣಾಳಿಕೆಯಲ್ಲಿ ನ್ಯೂನತಮ್ ಆಯ್ ಯೋಜನ (ನ್ಯಾಯ್) ಪ್ರಕಟಿಸಿದ್ದಾರೆ. ದೇಶದಲ್ಲಿನ ಶೇ 22 ರಷ್ಟಿರುವ ಕಡುಬಡವರ ಖಾತೆಗೆ ವಾರ್ಷಿಕ 72 ಸಾವಿರರೂಪಾಯಿಗಳನ್ನು ಹಾಕುವುದಾಗಿ ಹೇಳಿದಎರಡು ದಿನಗಳ ನಂತರ ಮಾಯಾವತಿ ಈ ರೀತಿಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ಬಡತನವನ್ನು ತಳಮಟ್ಟದಿಂದ ಕಿತ್ತುಹಾಕಬಹುದು ಎಂದು ಹೇಳಿದ್ದರು.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಎರಡು ದಿನಗಳ ನಂತರ ಪ್ರತಿಕ್ರಿಯೆ ನೀಡಿರುವ ಮಾಯಾವತಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಬಡವರನ್ನು ಮರೆತಿವೆ. ಎರಡೂ ಪಕ್ಷಗಳು ಬಡವರ ಬಗ್ಗೆ ನೀಡಿದ್ದ ಭರವಸೆಗಳೆಲ್ಲವೂ ಸುಳ್ಳು ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ಮಾಯಾವತಿ ತಮ್ಮ ಪಕ್ಷವಾದ ಬಿಎಸ್ಪಿ ಜೊತೆ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಹಾಗೂ ಅಜಿತ್ ಸಿಂಗ್ ನೇತೃತ್ವದ ಆರ್ ಎಲ್ ಡಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.