ADVERTISEMENT

ಗೋವಿನ ಸ್ಪರ್ಶದಿಂದ ನಕಾರಾತ್ಮಕತೆ ದೂರ: ಹೇಳಿಕೆ ಸಮರ್ಥಿಸಿದ ‘ಕೈ’ ನಾಯಕಿ ಯಶೋಮತಿ

ಮಹಾರಾಷ್ಟ್ರ ಸಚಿವೆ ಹೇಳಿಕೆಗೆ ವ್ಯಕ್ತವಾಗಿತ್ತು ಆಕ್ಷೇಪ

ಪಿಟಿಐ
Published 13 ಜನವರಿ 2020, 4:16 IST
Last Updated 13 ಜನವರಿ 2020, 4:16 IST
ಅಮರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯಶೋಮತಿ ಠಾಕೂರ್ –ಎಎನ್‌ಐ ಚಿತ್ರ
ಅಮರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯಶೋಮತಿ ಠಾಕೂರ್ –ಎಎನ್‌ಐ ಚಿತ್ರ   

ಮುಂಬೈ:ಗೋವಿನ ಸ್ಪರ್ಶದಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ, ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ.

ಗೋವನ್ನು ಮುಟ್ಟಿದಾಗ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ನಮ್ಮ ಸಂಸ್ಕೃತಿಯೇ ಹೇಳಿದೆಎಂದು ಅಮರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತುಪಿಟಿಐಸುದ್ದಿಸಂಸ್ಥೆಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಗೋವು ಪವಿತ್ರವಾದ ಪ್ರಾಣಿ. ದನ ಇರಲಿ ಅಥವಾ ಇತರ ಯಾವುದೇ ಪ್ರಾಣಿಯಾಗಲಿ ಅವುಗಳನ್ನು ಸ್ಪರ್ಶಿಸಿದಾಗ ನಮ್ಮಲ್ಲಿ ಸಹಾನುಭೂತಿ ಉಂಟಾಗುತ್ತದೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ಇದೇ ಮೊದಲಲ್ಲ:ವಾಶಿಮ್ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯಶೋಮತಿ, ‘ನಾವಿಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಜೇಬುಗಳು ಇನ್ನೂ ಬೆಚ್ಚಗಾಗಿಲ್ಲ’ ಎಂದು ಹೇಳಿದ್ದರು.

‘ಮತದಾರರು ಪ್ರತಿಪಕ್ಷದಿಂದ ಹಣ ಸ್ವೀಕರಿಸಬಹುದು. ಆದರೆ ಮತ ಮಾತ್ರ ಕಾಂಗ್ರೆಸ್‌ಗೇ ನೀಡಿ’ ಎಂದೂ ಹೇಳಿದ್ದರು. ಈ ಹೇಳಿಕೆಗಳೂ ವಿವಾದಕ್ಕೀಡಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.