ADVERTISEMENT

ನನ್‌ಗಳ ಬಂಧನಕ್ಕೆ ಖಂಡನೆ: ಸಂಸತ್‌ ಮುಂದೆ ಕೇರಳದ ಕಾಂಗ್ರೆಸ್‌ ಸಂಸದರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 10:54 IST
Last Updated 29 ಜುಲೈ 2025, 10:54 IST
<div class="paragraphs"><p>ಸಂಸದರ ಪ್ರತಿಭಟನೆ</p></div>

ಸಂಸದರ ಪ್ರತಿಭಟನೆ

   Prithvi

ನವದೆಹಲಿ: ಛತ್ತೀಸಗಢದಲ್ಲಿ ಇಬ್ಬರು ನನ್‌ಗಳ ಬಂಧನ ಖಂಡಿಸಿ ಕೇರಳದ ಕಾಂಗ್ರೆಸ್‌ ಸಂಸದರು ಸಂಸತ್‌ನ ಮಕರ ದ್ವಾರದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸಂಸದ ಶಶಿ ತರೂರ್‌ ಕೂಡ ಭಾಗವಹಿಸಿದ್ದರು. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಬೇಕು, ಬಿಜೆಪಿ ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಧಾರ್ಮಿಕ ಮತಾಂತರ ಮತ್ತು ಮಾನವ ಕಳ್ಳಸಾಗಣೆ ಆರೋಪದ ಮೇಲೆ ನನ್‌ಗಳಾದ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್‌ ಅವರನ್ನು ಬಂಧಿಸಲಾಗಿದೆ. 

ಈ ಬಂಧನವನ್ನು ಗಮನಿಸಿದರೆ ಇಲ್ಲಿ ಯಾವುದೊ ಒಂದು ಗುಂಪಿನ ಕೈವಾಡವಿದೆ ಎಂದು ನನಗೆ ಅನಿಸುತ್ತಿದೆ, ಸರ್ಕಾರ ಗೂಂಡಾಗಳನ್ನು ಬಂಧಿಸಬೇಕು, ಯಾವುದೇ ತಪ್ಪು ಮಾಡದ ನಿರಪರಾಧಿಗಳನ್ನು ಅಲ್ಲ, ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌, ಸಿಪಿಎಂ ಹಾಗೂ ಕ್ರೈಸ್ತ ಧರ್ಮ ನಾಯಕರು ನನ್‌ಗಳ ಬಂಧನವನ್ನು ಖಂಡಿಸಿದ್ದಾರೆ. ಈ ನಡುವೆ ‘ನನ್‌ಗಳಿಗೆ ಕಾನೂನುಬದ್ಧವಾಗಿ ಹಾಗೂ ಮಾನಸಿಕವಾಗಿ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅನೂಪ್‌ ಆ್ಯಂಟೊನಿ ಜೋಸೆಫ್‌ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗವು ಛತ್ತೀಸಗಢಕ್ಕೆ ತೆರಳಿದೆ ಎಂದು ಕೇರಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌. ಸುರೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.