
ಅಲ್ಕಾ ಲಾಂಬಾ
ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುವಾಗ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ದೆಹಲಿಯ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ಮಹಿಳಾ ಮೀಸಲಾತಿ ಬೆಂಬಲಿಸಿ 2024ರ ಜುಲೈ 29ರಂದು ಪ್ರತಿಭಟಿಸುತ್ತಿದ್ದಾಗ, ಅಲ್ಕಾ ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಜೊತೆಗೆ ಸಾರ್ವಜನಿಕ ರಸ್ತೆಯನ್ನು ನಿರ್ಬಂಧಿಸಿದ ಆರೋಪದಡಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶ್ವನಿ ಪನ್ವಾರ್ ಈ ಆದೇಶ ನೀಡಿದರು.
ಜ.5ರಂದು ದೋಷಾರೋಪ ನಿಗದಿಪಡಿಸಿ ಎಂದು ಸೂಚಿಸಿದ ನ್ಯಾಯಾಲಯವು, ಅಲ್ಕಾ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.
‘ಅಲ್ಕಾ ಅವರು ಪ್ರತಿಭಟನಕಾರರೊಂದಿಗೆ ಪೊಲೀಸ್ ಅಧಿಕಾರಿಗಳನ್ನು ತಳ್ಳಿದ್ದರು. ಬ್ಯಾರಿಕೇಡ್‌ಗಳನ್ನು ಕೆಡವಿದ್ದರು. ಅವರ ಜೊತೆಯಲ್ಲಿದ್ದ ಕೆಲವರು ರಸ್ತೆಯನ್ನು ನಿರ್ಬಂಧಿಸಿದ್ದರು’ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.