ADVERTISEMENT

ಸಂವಿಧಾನ ಕ್ಲಬ್‌: ಬಿಜೆಪಿ ಮುಖಂಡ ರಾಜೀವ್‌ ಪ್ರತಾಪ್‌ ರೂಢಿಗೆ ಗೆಲುವು

ಪಿಟಿಐ
Published 13 ಆಗಸ್ಟ್ 2025, 13:58 IST
Last Updated 13 ಆಗಸ್ಟ್ 2025, 13:58 IST
<div class="paragraphs"><p>ಸಂವಿಧಾನ ಕ್ಲಬ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಢಿ ಅವರಿಗೆ ಬೆಂಬಲಿಗರು ನವದೆಹಲಿಯಲ್ಲಿ ಬುಧವಾರ ಸಿಹಿ ತಿನ್ನಿಸಿದರು&nbsp; </p></div>

ಸಂವಿಧಾನ ಕ್ಲಬ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಢಿ ಅವರಿಗೆ ಬೆಂಬಲಿಗರು ನವದೆಹಲಿಯಲ್ಲಿ ಬುಧವಾರ ಸಿಹಿ ತಿನ್ನಿಸಿದರು 

   

ಪಿಟಿಐ ಚಿತ್ರ

ನವದೆಹಲಿ: ಬಿಜೆಪಿ ಮುಖಂಡ ರಾಜೀವ್‌ ಪ್ರತಾಪ್‌ ರೂಢಿ ಅವರು ಸಂವಿಧಾನ ಕ್ಲಬ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.

ADVERTISEMENT

ಜಿದ್ದಾಜಿದ್ದಿನ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಸಂಜೀವ್ ಬಾಲಿಯಾನ್ ಅವರನ್ನು ನೂರು ಮತಗಳ ಅಂತರದಿಂದ ಸೋಲಿಸಿದರು.

ಮಂಗಳವಾರ ತಡರಾತ್ರಿ ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೂಢಿ, ‘ಸಂವಿಧಾನ ಕ್ಲಬ್‌ ಚುನಾವಣೆಯಲ್ಲಿ ನಮ್ಮ ತಂಡವು ವಿಜಯ ಸಾಧಿಸಿದ್ದು, ಕ್ಲಬ್‌ನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲಿದೆ. ನಮ್ಮ ತಂಡದಲ್ಲಿ ಎಲ್ಲ ಪಕ್ಷಗಳ ಸದಸ್ಯರು ಇದ್ದಾರೆ’ ಎಂದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜೆ.ಪಿ. ನಡ್ಡಾ, ಕಾಂಗ್ರೆಸ್‌ನ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಪ್ರಮುಖರು ಕ್ಲಬ್‌ ಪದಾಧಿಕಾರಿಗಳ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.