ADVERTISEMENT

ಉಮೇಶ್‌ ಕೊಲ್ಹೆ ಹತ್ಯೆ ಸಂಚುಕೋರನ ಎನ್‌ಜಿಒ ಬ್ಯಾಂಕ್‌ ಖಾತೆ ತನಿಖೆ

ಆರೋಪಿ ಇರ್ಫಾನ್‌ ಖಾನ್‌ ಸರ್ಕಾರೇತರ ಸಂಸ್ಥೆ (ಎನ್‌ಜಿಒ)‘ರಹ್‌ಬಾರ್‌’ ನಿರ್ದೇಶಕ

ಪಿಟಿಐ
Published 3 ಜುಲೈ 2022, 13:03 IST
Last Updated 3 ಜುಲೈ 2022, 13:03 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಅಮರಾವತಿ (ಪಿಟಿಐ): ಮಹಾರಾಷ್ಟ್ರದ ಅಮರಾವತಿಯ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯ ಸಂಚುಕೋರ ಎಂದು ಹೇಳಲಾದ ಇರ್ಫಾನ್‌ ಖಾನ್‌ ಸರ್ಕಾರೇತರ ಸಂಸ್ಥೆ (ಎನ್‌ಜಿಒ)‘ರಹ್‌ಬಾರ್‌’ ನಿರ್ದೇಶಕನಾಗಿದ್ದು, ಪೊಲೀಸರು ಸಂಘಟನೆಯ ಬ್ಯಾಂಕ್‌ ಖಾತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ರಾಜಸ್ಥಾನದ ಟೇಲರ್‌ ಕನ್ಹಯ್ಯ ಲಾಲ್‌ ಹತ್ಯೆ ಮತ್ತುಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಗೆ ಸಾಮ್ಯತೆ ಇದೆ. ಇಬ್ಬರೂವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದರು’ ಎಂದು ಅವರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇರ್ಫಾನ್‌ ಖಾನ್ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ.ಈ ಪೈಕಿ ನಾಲ್ವರು ಇರ್ಫಾನ್‌ ಖಾನ್‌ ಸ್ನೇಹಿತರು ಮತ್ತು ಎನ್‌ಜಿಒನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.