ADVERTISEMENT

ಮಾಸ್ಕ್‌ ಧರಿಸದ, ದೈಹಿಕ ಅಂತರ ಗಾಳಿಗೆ ತೂರಿದ ಪೊಲೀಸ್‌ ಅಧಿಕಾರಿ ಅಮಾನತು

ಏಜೆನ್ಸೀಸ್
Published 4 ಜೂನ್ 2020, 14:59 IST
Last Updated 4 ಜೂನ್ 2020, 14:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾಸ್ಕ್‌ ಧರಿಸದ ಮತ್ತು ಕಚೇರಿಯಲ್ಲಿ ದೈಹಿಕಅಂತರ ಕಾಪಾಡಿಕೊಳ್ಳುವ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌‌(ಎಎಸ್‌ಐ) ಒಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು ಗುರುವಾರ ತಿಳಿಸಿದ್ದಾರೆ.

ಅಮಾನತುಗೊಂಡಿರುವ ಎಎಸ್ಐ ದೆಹಲಿ ಸಶಸ್ತ್ರ ಪೊಲೀಸರ 4ನೇ ಬೆಟಾಲಿಯನ್‌ನಲ್ಲಿ (ಡಿಎಪಿ) ಕಾರ್ಯನಿರ್ವಹಿಸುತ್ತಿದ್ದರು.

ದೈಹಿಕಅಂತರ ಕಾಪಾಡಿಕೊಳ್ಳುವ ಮಾನದಂಡ ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌‌ ವಿರುದ್ಧ ಇಲಾಖೆಯು ಕ್ರಮ ಕೈಗೊಂಡ ಮೊದಲ ಪ್ರಕರಣ ಇದು ಎಂದು ಉಪ ಪೊಲೀಸ್‌ ಆಯುಕ್ತ ಸತ್ಯವೀರ್ ಕಟಾರಾ ಹೇಳಿದ್ದಾರೆ.

'ಕೋವಿಡ್‌-19 ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೀಡಿರುವ ನಿರ್ದೇಶನಗಳ ಪ್ರಕಾರ, ಪೊಲೀಸ್‌ ಇನ್‌ಸ್ಪೆಕ್ಟರ್‌ ನಡೆದುಕೊಂಡಿಲ್ಲ. ಅವರು ಪುನರಾವರ್ತಿತ ತಪ್ಪುಗಳನ್ನು ಮಾಡುತ್ತಲೇ ಇದ್ದರು. ದೆಹಲಿಯ ಕಚೇರಿಯಲ್ಲಿ ಇರುವಾಗ ಮಾಸ್ಕ್‌ ಧರಿಸಿಲ್ಲ ಮತ್ತು ದೈಹಿಕಅಂತರದ ಮಾನದಂಡಗಳನ್ನು ಪಾಲಿಸಿಲ್ಲ. ಅವರ ಬಗ್ಗೆ ಯಾವುದೇ ಪೂರ್ವಾಗ್ರಹ ಹೊಂದಿರದ ಇಲಾಖೆಯು ಅವರನ್ನು ತಕ್ಷಣವೇ ಅಮಾನತುಗೊಳಿಸಿದೆ' ಎಂದು ಸತ್ಯವೀರ್‌ ಕಟಾರಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.