ADVERTISEMENT

Covid-19 India Update: 40,000 ದಾಟಿತು ಸೋಂಕಿತರ ಸಂಖ್ಯೆ, 2487 ಹೊಸ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2020, 15:01 IST
Last Updated 3 ಮೇ 2020, 15:01 IST
   
""

ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಭಾನುವಾರ 40 ಸಾವಿರದ ಗಡಿ ದಾಟಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ವಿಧಿಸಿದ್ದ 2ನೇ ಹಂತದ ಲಾಕ್‌ಡೌನ್ ಭಾನುವಾರಕ್ಕೆ ಮುಕ್ತಾಯವಾಗಿದೆ. ನಾಳೆಯಿಂದ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೆಲ ರಿಯಾಯ್ತಿಗಳು ಸಿಗುತ್ತವೆ. ಆದರೆ ಕೆಂಪು ವಲಯದಲ್ಲಿ ಮಾತ್ರ ಮೇ 17ರವರೆಗೆ ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರಿಯಲಿವೆ.

ಲಾಕ್‌ಡೌನ್‌ ಘೋಷಣೆ ಸಂದರ್ಭದಲ್ಲಿಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40,263. ಈವರೆಗೆ ಒಟ್ಟು ಸತ್ತವರ ಸಂಖ್ಯೆ 1,306. ಕಳೆದ 24 ಗಂಟೆಗಳಲ್ಲಿ 83 ಸಾವು ಮತ್ತು 2487 ಹೊಸ ಪ್ರಕರಣಗಳು ವರದಿಯಾಗಿವೆ.

ADVERTISEMENT

ಕೇರಳದಲ್ಲಿ ಇಂದು ಒಂದೂ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,296 ತಲುಪಿದೆ. ಇಂದು ಒಂದೇ ದಿನ 21 ಮಂದಿ ಮೃತಪಟ್ಟಿದ್ದಾರೆ.ಗುಜರಾತ್‌ನಲ್ಲಿ 5055, ದೆಹಲಿಯಲ್ಲಿ 4122, ಮಧ್ಯ ಪ್ರದೇಶದಲ್ಲಿ 2846 ಮತ್ತು ರಾಜಸ್ಥಾನದಲ್ಲಿ 2770 ಮಂದಿಗೆ ಸೋಂಕು ತಗುಲಿದೆ.

ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಕೋವಿಡ್–19ಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 266 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಶಂಖ್ಯೆ 3,023ಕ್ಕೇರಿದೆ.

ಪಂಜಾಬ್‌ನಲ್ಲಿ 331 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,102ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.