ADVERTISEMENT

ಜಮ್ಮು ಕಾಶ್ಮೀರ: ಕೋವಿಡ್‌–19 ಸೋಂಕಿಗೆ ಮತ್ತೊಂದು ಬಲಿ, ಸೋಂಕಿತರ ಸಂಖ್ಯೆ 38ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 7:34 IST
Last Updated 29 ಮಾರ್ಚ್ 2020, 7:34 IST
ಶ್ರೀನಗರದಲ್ಲಿ ಆಸ್ಪತ್ರೆಯ ಸುತ್ತ ಸೋಂಕು ನಿಯಂತ್ರಕ ಸಿಂಪಡಿಸುತ್ತಿರುವ ಸಿಬ್ಬಂದಿ.
ಶ್ರೀನಗರದಲ್ಲಿ ಆಸ್ಪತ್ರೆಯ ಸುತ್ತ ಸೋಂಕು ನಿಯಂತ್ರಕ ಸಿಂಪಡಿಸುತ್ತಿರುವ ಸಿಬ್ಬಂದಿ.   

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಭಾನುವಾರ ಕೋವಿಡ್‌–19 ಸೋಂಕಿನಿಂದ 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಾರಣಾಂತಿಕ ಈ ಸೋಂಕಿಗೆ ಮೃತಪಟ್ಟ ಎರಡನೇ ಪ್ರಕರಣ ಇದಾಗಿದ್ದು, ಈವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಬಾರಾಮುಲ್ಲ ಜಿಲ್ಲೆಯ ತಂಗಮಾರ್ಗದ ನಿವಾಸಿಯಾದ ಈ ವ್ಯಕ್ತಿಗೆ ಶನಿವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದ ಎದೆರೋಗಗಳ ಆಸ್ಪತ್ರೆಯ ಪ್ರತ್ಯೇಕ ಘಟಕದಲ್ಲಿ ಇರಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರು ಭಾನುವಾರ ಮುಂಜಾನೆ ಸಾವನ್ನಪಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

'ಇಂದು ದುಃಖದೊಂದಿಗೆ ಆರಂಭವಾದ ದಿನ. ಶ್ರೀನಗರದಲ್ಲಿ ಭಾನುವಾರ ಬೆಳಿಗ್ಗೆ ಉಂಟಾದ ಕೋವಿಡ್‌ ಸೋಂಕಿತನ ಸಾವು ದುರದುಷ್ಟಕರ’ ಎಂದು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.